Today Hassan

Today Hassan Contact information, map and directions, contact form, opening hours, services, ratings, photos, videos and announcements from Today Hassan, Advertising/Marketing, hassan, Hassan.
(4)

22/08/2026

* #ಬೆಳ್ಳಂಬೆಳಿಗ್ಗೆ ಸುಮಾರು 40 ಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಬೇಲೂರು ತಾಲ್ಲೂಕಿನ, ಬಿಕ್ಕೋಡು ಹೋಬಳಿ, ಕೋಡಿಹಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿವೆ. ಕಾಡಾನೆಗಳ ನಡೆದುಕೊಂಡು ಹೋಗುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. *

22/08/2026

* #ಸಚಿವ ನಾಗೇಂದ್ರ ಅವರ ವಿಚಾರದಲ್ಲಿ ಜಾತಿ ಕ್ಲೈಮ್ ಮಾಡಲು ಆಗಲ್ಲ. ಅವರು ನಾಡಿನ ಮಂತ್ರಿಯಾಗಿ ಕೆಲಸ ಮಾಡಿದವರು. ಕೊಟ್ಟ ಜವಾಬ್ದಾರಿಯಲ್ಲಿ ನಡೆದಿರುವ ಅಕ್ರಮ. 189 ಕೋಟಿ ಅಲ್ಲಾ 84 ಕೋಟಿ ಅವ್ಯವಹಾರ ಆಗಿದೆ ಎಂದು ಅಂದಿನ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಆನಂತರ ಅವರ ರಾಜೀನಾಮೆ ಪಡೆದಿದ್ದಾರೆ. ಮತ್ತೆ ಅದೇ ವ್ಯಕ್ತಿ ಮಂತ್ರಿ ಮಾಡಿಕೊಂಡರೆ ರಾಜ್ಯದ ಜನತೆಗೆ ಏನು ಸಂದೇಶ ಕೊಡ್ತಿರಿ. ಏತಕ್ಕೆ ಸರ್ಕಾರಕ್ಕೆ ಈ ಮೊಂಡುತನ. ಕೇಂದ್ರ ಸಚಿವ ಎಚ್‌ಡಿಕೆ. *

22/08/2026

* #ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಎರಡು ಕೋಟಿ ಪರಿಹಾರ ಏನು ಧರ್ಮಕ್ಕೆ ಕೊಡ್ತಿರಾ. ಕೇಂದ್ರ ಸಚಿವ ಎಚ್.ಡಿ‌.ಕುಮಾರಸ್ವಾಮಿ ಆಕ್ರೋಶ.*

22/08/2026

* #ನೈಸ್ ರಸ್ತೆ ದೇವೇಗೌಡರ ಕೂಸು ಅಂತಾರೆ. ಹೌದಪ್ಪ ಅದು ದೇವೇಗೌಡರ ಕೂಸೆ. ದೇವೇಗೌಡರು ಇದ್ದ ಹದಿನೆಂಟು ತಿಂಗಳಿನಲ್ಲಿ ಎಂಓಯು ಸಹಿ ಹಾಕಿ ದೆಹಲಿ ರಾಜಕಾರಣಕ್ಕೆ ಹೋದರು. ಆಮೇಲೆ ಏನೇನು ನಡಿಯಿತು. ಮುಖ್ಯಮಂತ್ರಿ ವಿರುದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ. *

22/08/2026

* #ಗ್ರಾಮ ಪಂಚಾಯ್ತಿ ಚುನಾವಣೆಗೆ ಮೀಸಲಾತಿ ಪ್ರಕಟ. ತಹಸೀಲ್ದಾರ್ ಕೊಟ್ಟ ಮೀಸಲಾತಿಯನ್ನು ಡಿಸಿ ಅವರು ಬದಲಾಯಿಸಿದ್ದಾರೆ ಎಂಬ ಆರೋಪ. ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ಮಾಜಿಸಚಿವ ಎಚ್.ಡಿ.ರೇವಣ್ಣ ಕೆಂಡಾಮಂಡಲ. ಶಾಸಕರುಗಳಾದ ಎ.ಮಂಜು, ಎಚ್.ಪಿ.ಸ್ವರೂಪ್‌ಪ್ರಕಾಶ್, ಮಾಜಿಸಚಿವ ಎಚ್.ಕೆ.ಕುಮಾರಸ್ವಾಮಿ ಅವರ ಜೊತೆ ಮಾಜಿಸಚಿವ ಎಚ್.ಡಿ.ರೇವಣ್ಣ ಜಂಟಿ ಸುದ್ದಿಗೋಷ್ಟಿ. ನನ್ನ ಮೂವತ್ತು ವರ್ಷದ ರಾಜಕೀಯ ‌ಜೀವನದಲ್ಲಿ ಇಂತಹ ಡಿಸಿ ನೋಡಲಿಲ್ಲ ಎಂದು ವಾಗ್ದಾಳಿ.* # Todayhassan

22/08/2026

* #ಶ್ರಾವಣಮಾಸದ ಎರಡನೇ ಶನಿವಾರವಾದ ಇಂದು ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ, ಪತ್ನಿ ಭವಾನಿರೇವಣ್ಣ, ಪುತ್ರ ಸೂರಜ್‌ರೇವಣ್ಣ ಭಾಗಿಯಾಗಿದ್ದರು. ಕುಟುಂಬ ಸದಸ್ಯರ ಜೊತೆ ರಂಗನಾಥಸ್ವಾಮಿಗೆ ಅಭಿಷೇಕ ನೆರವೇರಿಸಿದರು. ಇನ್ನೊಂದೆಡೆ ಬೆಟ್ಟದ ರಂಗನಾಥಸ್ವಾಮಿ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿದ್ದರಿಂದ ಅಭಿಷೇಕದ ಬಳಿಕ ಅಲಂಕಾರಕ್ಕಾಗಿ ಗರ್ಭಗುಡಿ ಬಾಗಿಲನ್ನು ಅರ್ಚಕರು ಮುಚ್ಚಿದ್ದರು. ಬಾಗಿಲು ಮುಚ್ಚುವ ಮುನ್ನ ದೇವಾಲಯದ ಮುಖ್ಯದ್ವಾರದ ಎದುರು ನಿಂತು ಭಕ್ತರನ್ನು ಕರೆದು ದೇಗುಲದ ಒಳಗೆ ಕಳಿಸಿದರು.*

* #ಮನೆಯಲ್ಲಿಯೇ ಅನುಮಾನಸ್ಪದವಾಗಿ ಯುವತಿ ಸಾ**ರುವ ಘಟನೆ ಚನ್ನರಾಯಪಟ್ಟಣದ, ಅಂಬಿಕ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ರಚಿತಾ (19) ಸಾ**ನ್ನಪ...
22/08/2026

* #ಮನೆಯಲ್ಲಿಯೇ ಅನುಮಾನಸ್ಪದವಾಗಿ ಯುವತಿ ಸಾ**ರುವ ಘಟನೆ ಚನ್ನರಾಯಪಟ್ಟಣದ, ಅಂಬಿಕ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ರಚಿತಾ (19) ಸಾ**ನ್ನಪ್ಪಿರುವ ಯುವತಿ. ಸಾಕಮ್ಮ-ಮಂಜಶೆಟ್ಟಿ ಎಂಬುವವರ ಪುತ್ರಿ ರಚಿತಾ. ಮೊದಲ ವರ್ಷದ ಬಿಎ ಓದುತ್ತಿದ್ದ ರಚಿತಾ. ನವೀನ್ ಎಂಬಾತನ ವಿರುದ್ಧ ರಚಿತಾ ಪೋಷಕರ ಆರೋಪ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು. *

* #ವಿವಿಧ ಸಾಲ ಹಾಗೂ ಸಹಾಯಧನ ಸೌಲಭ್ಯಗಳಿಗೆ ಅರ್ಜಿ ಆಹ್ವಾನ.* #ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಹಾಸನ ಜಿಲ್ಲೆ ವತಿಯಿಂದ ಜಿಲ್ಲಾ...
21/08/2026

* #ವಿವಿಧ ಸಾಲ ಹಾಗೂ ಸಹಾಯಧನ ಸೌಲಭ್ಯಗಳಿಗೆ ಅರ್ಜಿ ಆಹ್ವಾನ.* #
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಹಾಸನ ಜಿಲ್ಲೆ ವತಿಯಿಂದ ಜಿಲ್ಲಾದ್ಯಂತ ವಾಸವಿರುವ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಜನಾಂಗದವರಿಗೆ 2026-2027 ನೇ ಸಾಲಿನಲ್ಲಿ ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಶ್ರಮ ಶಕ್ತಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ ಯೋಜನೆ, ಗಂಗಾ ಕಲ್ಯಾಣ ಯೋಜನೆ, ನವೋದಯ ಯೋಜನೆ, ಫಾಸ್ಟ್‌ಫುಡ್ ಟ್ರಕ್/ಟೈಲರ್ ಕಿಚನ್ ಫುಡ್ (ಕಿಯೋಸ್ಟ್) ಯೋಜನೆ, ಅಲ್ಪಸಂಖ್ಯಾತರ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಪ್ರೋತ್ಸಾಹ ಯೋಜನೆ, ಸಿಖ್ ಲಿಗಾರ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹ ಯೋಜನೆ, ಸಮುದಾಯ ಆಧಾರಿತ ತರಬೇತಿ ಯೋಜನೆ, ವಿದೇಶಿ ವಿದ್ಯಾಭ್ಯಾಸ ಸಾಲ, ವ್ಯಾಪಾರ/ಉದ್ದಿಮೆ ನೇರ ಸಾಲ ಯೋಜನೆ, ಸಾಂತ್ವನ ಯೋಜನೆಗಳಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯಧನ ಸೌಲಭ್ಯಗಳನ್ನು ನೀಡಲು ಸೆ.17 ರವರೆಗೆ ಆನ್‌ಲೈನ್ Website: kmdconline.karnataka.gov.in ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಹಾಸನ ಕಚೇರಿ ಹಾಗೂ ದೂರವಾಣಿ ಸಂಖ್ಯೆ : 08172-246333 ನಂಬರ್‌ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ. *

Address

Hassan
Hassan

Website

Alerts

Be the first to know and let us send you an email when Today Hassan posts news and promotions. Your email address will not be used for any other purpose, and you can unsubscribe at any time.

Shortcuts

Share