Suddi Manthana - ಸುದ್ದಿ ಮಂಥನ

Suddi Manthana - ಸುದ್ದಿ ಮಂಥನ Explore hidden talents & unexplored things, temples, historical places, persons etc,..

ಗೊರೂರು ಹಳೇ ವಿದ್ಯಾರ್ಥಿಗಳಿಂದ ಗುರು ವಂದನೆ ಕಾರ್ಯಕ್ರಮ
26/05/2026

ಗೊರೂರು ಹಳೇ ವಿದ್ಯಾರ್ಥಿಗಳಿಂದ ಗುರು ವಂದನೆ ಕಾರ್ಯಕ್ರಮ

Homeಸುದ್ದಿಗಳುಗೊರೂರು ಹಳೇ ವಿದ್ಯಾರ್ಥಿಗಳಿಂದ ಗುರು ವಂದನೆ ಕಾರ್ಯಕ್ರಮ ಗೊರೂರು ಹಳೇ ವಿದ್ಯಾರ್ಥಿಗಳಿಂದ ಗುರು ವಂದನೆ ಕಾರ್ಯಕ್ರಮ ಸ.....

Sandal farm land near chikkanayakanahalli, Tumkur.For more information: Contact - 9844488900       We are so happy after...
15/01/2026

Sandal farm land near chikkanayakanahalli, Tumkur.

For more information: Contact - 9844488900

We are so happy after buying agricultural land! I had this passion about farming but it was not realistic for us to go to the field and make people work or give our inputs for our thoughts, So that is where we got to know that there is something called Kimberly Properties to work with our thoughts.. Thank you Kimberly Properties for making our dreams come true😊

Do you want to buy agricultural land? Then it is the right time to invest in farmland.

For more information:
Contact - 9844488900

21/09/2025

ನಾವು ಕಂಡಂತೆ ಗೊರೂರು ಅನಂತರಾಜು - about Gorur Anantharaju.

ಗೊರೂರು ಅನಂತರಾಜು ಇವರು ಹುಟ್ಟಿದ್ದು ಹಾಸನ ಜಿಲ್ಲೆಯ ಗೊರೂರು ಗ್ರಾಮ. ನೀರಾವರಿ ಇಲಾಖೆಯ ಸರ್ಕಾರಿ ಸೇವೆಯಲ್ಲಿದ್ದು, ಸಾಹಿತಿಗಳು, ನಾಟಕಕಾರರು, ಕವಿಗಳೂ ಹೌದು. ಹಲವಾರು ಕವಿತೆಗಳು, ಚುಟುಕಗಳು, ಕಥೆಗಳು ಇವರ ಮನದಾಳದಿಂದ ಮೂಡಿವೆ. ಇವರೊಬ್ಬ ಬಹುಮುಖ ಪ್ರತಿಭೆ.

ಓಂಕಾರ ಎಂದರೇನು?ಅ, ಉ, ಮ ಗಳ ಸಂಗಮವೇ ಓಂಕಾರ. ಸೃಷ್ಟಿ, ಸ್ಥಿತಿ, ಲಯಗಳ  ಪ್ರತೀಕವೇ ಓಂಕಾರ.ಮಾನವ ದೇಹದ 114 ಚಕ್ರಗಳಲ್ಲಿ, 112 ಶಾರೀರಿಕ ಚಕ್ರಗಳ...
02/09/2025

ಓಂಕಾರ ಎಂದರೇನು?
ಅ, ಉ, ಮ ಗಳ ಸಂಗಮವೇ ಓಂಕಾರ. ಸೃಷ್ಟಿ, ಸ್ಥಿತಿ, ಲಯಗಳ ಪ್ರತೀಕವೇ ಓಂಕಾರ.

ಮಾನವ ದೇಹದ 114 ಚಕ್ರಗಳಲ್ಲಿ, 112 ಶಾರೀರಿಕ ಚಕ್ರಗಳು ಮತ್ತು 2 ಬಾಹ್ಯ ಚಕ್ರಗಳು, ಇದರಲ್ಲಿ 86 ಸೂಕ್ಷ್ಮ ಚಕ್ರಗಳು (ಅಕ್ಯುಪಂಕ್ಚರ್ ಪಾಯಿಂಟ್‌ಗಳು), 21 ಸಣ್ಣ ಚಕ್ರಗಳು, ಮತ್ತು 7 ಪ್ರಮುಖ ಚಕ್ರಗಳು (5 ಬೆನ್ನುಮೂಳೆಯಲ್ಲಿ, 1 ಹಣೆಯ ಮೇಲೆ, ಮತ್ತು 1 ತಲೆಯ ಮೇಲೆ) ಇವೆ.

ಪ್ರಮುಖ 7 ಚಕ್ರಗಳೆಂದರೆ ಮೂಲಾಧಾರ, ಸ್ವಾಧಿಷ್ಠಾನ, ಅನಾಹತ, ವಿಶುದ್ಧಿ, ಆಜ್ಞಾ, ಸಹಸ್ರಾರ, ಸಪ್ತಧಾಮ.

ಮೂಲಧಾರ ಎಂದರೆ ಗಣಪತಿ. ಸ್ವಾಧಿಷ್ಟಾನ ಎಂದರೆ ಪೃಥ್ವಿ.

ಮಣಿಪುರ ಎಂದರೆ ನೀರು. ಅನಾಹತ ಎಂದರೆ ಅಗ್ನಿ ಅಥವಾ ರುದ್ರ ಶಕ್ತಿ,.

ವಿಶುದ್ಧಿ ಎಂದರೆ ವಾಯು. ಆಜ್ಞಾ ಎಂದರೆ ಆಕಾಶ ಅಥವಾ ಸದಾ ಶಿವ

ಚಕ್ರಗಳು ನಿಮ್ಮ ಆಸ್ಟ್ರಲ್ ದೇಹದ ವಿವಿಧ ಕೇಂದ್ರಗಳಲ್ಲಿವೆ . ಈ ಆಸ್ಟ್ರಲ್ ದೇಹದ ಶಕ್ತಿಯನ್ನು ಬೆನ್ನುಮೂಳೆಯ ಬುಡದಿಂದ ತಲೆಯ ತುದಿಯವರೆಗೆ ಅನುಭವಿಸಬಹುದು.

ಆಸ್ಟ್ರಲ್ ದೇಹವು ಭೌತಿಕ ದೇಹದೊಳಗೆ ವಾಸಿಸುವ ಒಂದು ಶಕ್ತಿ ದೇಹದಂತೆ. ಪ್ರತಿಯೊಂದು ಭೌತಿಕ ದೇಹದ ಭಾಗವು ಆಸ್ಟ್ರಲ್ ದೇಹದ ಭಾಗದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ . ಆಸ್ಟ್ರಲ್ ದೇಹವನ್ನು ಸ್ಪರ್ಶಿಸಲು ಅಥವಾ ನೋಡಲು ಸಾಧ್ಯವಾಗದ ಕಾರಣ, ನಾವು ಚಕ್ರಗಳನ್ನು ನೋಡಲು ಸಾಧ್ಯವಿಲ್ಲ.

ಪಂಚಭೂತಗಳು ನ (ಭೂಮಿ) ಮ (ಜಲ) ಸಿ (ಬೆಂಕಿ) ವ (ವಾಯು) ಯ (ಆಕಾಶ) ಎಂಬ ಶಬ್ದಗಳನ್ನು ಹೊಂದಿವೆ ಮತ್ತು ಇದು ಮಂತ್ರ ನ ಮ ಸಿ ವ ಯ ಆಗಿದೆ.

ಪ್ರತಿಯೊಂದು ಬೂತಕ್ಕೂ ದೇವತೆಗಳು ಇವೆ.

ನ ಎಂದರೆ ಬ್ರಹ್ಮದೇವ, ಮ ಎಂದರೆ ವಿಷ್ಣು, ಸಿ ಎಂದರೆ ರುದ್ರ (ಶಿವನಲ್ಲ), ವ ಎಂದರೆ ಮಹೇಶ್ವರ (ಶಿವ ಈಶ್ವರನಲ್ಲ), ಯ ಎಂದರೆ ಸದಾಶಿವ (ಶಿವನಲ್ಲ).

Hide quoted text
3.20 ರಿಂದ 3.30 ಬೆಳಗಿನ ಜಾವದ ಸಮಯವನ್ನು ಭ್ರಹ್ಮ ಮುಹೂರ್ತಮ್ ಎಂದು ಕರೆಯುತ್ತಾರೆ.

ಮಾನವನಲ್ಲಿ 3 ವಿಧದ ದೇಹಗಳು ಇವೆ.

Hide quoted text
1. ಸ್ಥೂಲ ಶರೀರ physical body

2. ಸೂಕ್ಷ್ಮ ಶರೀರ Subtle body

3. ಕಾರಣ ಶರೀರ Cautious body

ಈ ಮೇಲಿನ 3 ದೇಹಗಳು ಕೆಳಗಿನ 5 ಕೋಶಗಳಲ್ಲಿ ವರ್ಗೀಕರಿಸಲಾಗಿದೆ:

1. ಅನ್ನಮಯ ಕೋಶ - physical body (ಸ್ಥೂಲ ಶರೀರ)

2. ಪ್ರಾಣಮಯ ಕೋಶ - pronic body (ಸೂಕ್ಷ್ಮ ಶರೀರ)

3. ಮನೋಮಯ ಕೋಶ - Mental body (ಸೂಕ್ಷ್ಮ ಶರೀರ)

4. ವಿಜ್ಞಾನಮಯ ಕೋಶ - intellectual body(ಸೂಕ್ಷ್ಮ ಶರೀರ)

5. ಆನಂದಮಯ ಕೋಶ - causal body (ಕಾರಣ ಶರೀರ)

ಜನುಮಗಳಿಂದ ನಮ್ಮ ಜೊತೆ ಬಂದಿರುವ ಸಂಸ್ಕಾರಗಳೇ ಕರ್ಮಗಳಾದ್ದರಿಂದ.. ಈ ಕರ್ಮ, ಹಣೆಬರಹ, ಸಂಸ್ಕಾರ ಎಲ್ಲಾ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಹಾಗೇ fixed ಕೂಡ ಇರಲ್ಲ. ಇದು change/modify ಆಗುತ್ತೆ ನಮ್ಮ ಈ ಜನುಮದ ನಡವಳಿಕೆ, ಚಟುವಟಿಕೆ, ಚಿಂತನೆ ಮತ್ತು ಈ ಜನ್ಮದಲ್ಲಿ ಮಾಡುವ ಕರ್ಮ ಹಾಗೂ ರೂಢಿಸಿಕೊಳ್ಳುವ ಸಂಸ್ಕಾರಗಳಿಂದ. ಹಾಗಾಗಿ ಸಾತ್ವಿಕ ಸತತ ಪ್ರಯತ್ನ ಅಗತ್ಯ.

ನಮ್ಮ ಒಳಗೆ ಎಲ್ಲಾ ಶಕ್ತಿ ಇದ್ದರೂ ಮಾಯೆಯ ಪೊರೆಗಳು (layers) ನಮ್ಮನ್ನು ಆವರಿಸಿರುತ್ತವೆ.. ಪೂರ್ವ ಜನ್ಮಗಳ ಅರಿವು ಮರೆತು ಹೋಗಿರುತ್ತೇವೆ. ನಮ್ಮನ್ನು ನಾವು ಅರಿತಾಗ ಪೊರೆಗಳು ಕಳಚುತ್ತಾ ಹೋಗುತ್ತವೆ ಹಾಗೇ ಜ್ಞಾನ ವಿಕಸಿತವಾಗುತ್ತಾ ಬರುತ್ತದೆ. ಎಲ್ಲಾ ಒಳಗೆ ಇದ್ದರೂ ಅದನ್ನು ಗುರುತಿಸುವ ಸಾಧನ ಬೇಕು.. ಅದನ್ನು Tap ಮಾಡಿ ಎಚ್ಚರಿಸುವ ಶಕ್ತಿ ಬೇಕು. ಆ ಸ್ತುಪ್ತ ಶಕ್ತಿಯನ್ನು ಜಾಗೃತಗೊಳಿಸುವ ಮಾರ್ಗಗಳೇ..

ಭಕ್ತಿ ಯೋಗ

ಕರ್ಮ ಯೋಗ

ಜ್ಞಾನ ಯೋಗ

ರಾಜ ಯೋಗ.

ಇವುಗಳನ್ನು ಪಡೆಯುವ ವಿಧಾನಗಳೇ..:

ಧ್ಯಾನ, ಪ್ರಾಣಾಯಾಮ, ಯೋಗ, ಭಜನೆ, ಜಪ, ತಪಸ್ಸು, ಮುದ್ರಾ, ರೇಖಿ, ಅಧ್ಯಾತ್ಮ, ಭಕ್ತಿ, ಪ್ರಾರ್ಥನೆ, ಯಜ್ಞ, ಸತ್ಸಂಗ, ಸಾತ್ವಿಕ ಆಹಾರ ಸೇವನೆ ಇವೆಲ್ಲವುಗಳು.

ಮಾನವ ದೇಹದಲ್ಲಿ 72,000 ಕ್ಕೂ ಹೆಚ್ಚು ನಾಡಿಗಳಿವೆ ಎಂದು ಹೇಳಲಾಗುತ್ತದೆ.

ಅವುಗಳಲ್ಲಿ ಮೂರು ಪ್ರಮುಖವಾಗಿವೆ.

ಅವುಗಳೆಂದರೆ ಇಡಾ, ಪಿಂಗಲಾ ಮತ್ತು ಸುಷುಮ್ನಾ.

ಪ್ರಾಣವು ಎಡ ಮತ್ತು ಬಲ ಮೂಗಿನ ಹೊಳ್ಳೆಯ ಉಸಿರಾಟಕ್ಕೆ ಅನುರೂಪವಾಗಿರುವ ಇಡಾ ಅಥವಾ ಪಿಂಗಲಾ ಮೂಲಕ ಹರಿಯುತ್ತದೆ.

ಸುಷುಮ್ನಾ ಪೂರ್ವನಿಯೋಜಿತವಾಗಿ ಮುಚ್ಚಲ್ಪಟ್ಟಿದೆ. ಯೋಗದ ಗುರಿ ಪ್ರಾಣವನ್ನು ಸುಷುಮ್ನಾಕ್ಕೆ ಹೋಗುವಂತೆ ಮಾಡುವುದು. ಚಕ್ರಗಳು ಸುಷುಮ್ನಾದ ಉದ್ದಕ್ಕೂ ನೆಲೆಗೊಂಡಿವೆ ಮತ್ತು ಪ್ರಾಣವನ್ನು ಅದರೊಳಗೆ ತೆಗೆದುಕೊಳ್ಳುವುದರಿಂದ ಕುಂಡಲಿನಿ ಮತ್ತು ಚಕ್ರಗಳನ್ನು ಜಾಗೃತಗೊಳಿಸುತ್ತದೆ.

ಓಂಕಾರ ಎಂದರೇನು?ಅ, ಉ, ಮ ಗಳ ಸಂಗಮವೇ ಓಂಕಾರ. ಸೃಷ್ಟಿ, ಸ್ಥಿತಿ, ಲಯಗಳ ಪ್ರತೀಕವೇ ಓಂಕಾರ.ಮಾನವ ದೇಹದ 114 ಚಕ್ರಗಳಲ್ಲಿ, 112 ಶಾರೀರಿಕ ಚಕ್ರಗಳು ....

ಗೊರೂರು ಶಿವೇಶ್ ಸರ್.. Gorur GBS sir 💐
30/10/2024

ಗೊರೂರು ಶಿವೇಶ್ ಸರ್.. Gorur GBS sir 💐

'ಅಮರ . . . ಮಧುರ . . . ಸ್ನೇಹ' ವಿಶೇಷ ಬರಹ-ಗೊರೂರು ಶಿವೇಶ್ ಮುಂದೆ ಪ್ರೌಢಶಾಲೆಗೆ ಕಾಲಿರಿಸಿದಾಗ ಸೆಕ್ಷನ್‍ಗಳು ಬದಲಾವಣೆಯಾಗಿ ಭೇಟಿಗಳ ಸಂಖ್...

ಕನ್ನಡ - ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ........ಕನ್ನಡಕ್ಕಾಗಿ ಕೈ ಎತ್ತು ಅ...
27/10/2024

ಕನ್ನಡ - ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ........

ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪ ವೃಕ್ಷ........

ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ, ಜೈನರಾಗಿರಿ, ಬಸವ ಧರ್ಮದವರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ ಧರ್ಮದವರಾಗಿರಿ.....

ನೀವು ಕಾಂಗ್ರೇಸ್ ಆಗಿರಲಿ, ಬಿಜೆಪಿ ಆಗಿರಲಿ, ಜೆಡಿಎಸ್ ಆಗಿರಲಿ, ಕಮ್ಯುನಿಸ್ಟ್ ಆಗಿರಲಿ, ಸಮಾಜವಾದಿ ಪಕ್ಷ ಆಗಿರಲಿ, ಸಂಯುಕ್ತ ಜನತಾದಳ ಆಗಿರಲಿ, ಬಿಎಸ್ಪಿ ಆಗಿರಲಿ, ಎಎಪಿ ಆಗಿರಲಿ, ಕೆ ಆರ್ ಎಸ್ ಆಗಿರಲಿ, ಪ್ರಜಾಕೀಯ ಆಗಿರಲಿ, ಜೆ ಪಿ ಪಕ್ಷದವರಾಗಿರಲಿ ಅಥವಾ ಇನ್ಯಾವುದೇ ಪಕ್ಷದವರಾಗಿರಿ,.....

ನೀವು ಪರಿಶಿಷ್ಟ ಜಾತಿಯವರಾಗಿರಿ, ಪಂಗಡದವರಾಗಿರಿ, ಬ್ರಾಹ್ಮಣರಾಗಿರಿ, ಲಿಂಗಾಯತರಾಗಿರಿ, ಒಕ್ಕಲಿಗರಾಗಿರಿ, ಕುರುಬರಾಗಿರಿ, ವಾಲ್ಮೀಕಿ ಸಮುದಾಯದವರಾಗಿರಿ, ವಿಶ್ವಕರ್ಮದವರಾಗಿರಿ, ತಿಗಳರಾಗಿರಿ, ಯಾದವರಾಗಿರಿ ಅಥವಾ ಯಾವುದೇ ಜಾತಿಯವರಾಗಿರಿ,......

ನೀವು ವೈದ್ಯರಾಗಿರಿ, ಶಿಕ್ಷಕರಾಗಿರಿ, ಭಿಕ್ಷುಕರಾಗಿರಿ, ಕೂಲಿಯಾಗಿರಿ, ವಕೀಲರಾಗಿರಿ, ಆರಕ್ಷಕರಾಗಿರಿ, ಲೆಕ್ಕ ಪರಿಶೋಧಕರಾಗಿರಿ, ರಾಜಕಾರಣಿಯಾಗಿರಿ, ಅಧಿಕಾರಿಯಾಗಿರಿ, ರೈತರಾಗಿರಿ, ಕಾರ್ಮಿಕರಾಗಿರಿ ಅಥವಾ ಯಾರೇ ಆಗಿರಿ........

ಕರ್ನಾಟಕದ ಶಾಶ್ವತ ನಿವಾಸಿಗಳಾಗಿದ್ದರೆ, ತಾಯಿ ಭಾಷೆ ಕನ್ನಡದ ವಿಷಯ ಬಂದಾಗ ದಯವಿಟ್ಟು ಕನ್ನಡಿಗರಾಗಿರಿ ಮತ್ತು ಒಕ್ಕೊರಲಿನಿಂದ ಕನ್ನಡ ಪರ ಧ್ವನಿ ಎತ್ತಿ. ಅದು ಹಿಂದಿ ಏರಿಕೆ ಇರಬಹುದು, ಸಂಸ್ಕೃತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಬಹುದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಕಡೆಗಣನೆ ಇರಬಹುದು, ರಾಜಕೀಯ ಕಾರಣಗಳಿಗಾಗಿ ಕರ್ನಾಟಕದ ಹಕ್ಕುಗಳು ಮೇಲಿನ ಹಲ್ಲೆ ಇರಬಹುದು ಅಥವಾ ಯಾವುದೇ ವಿಷಯವಿರಲಿ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆ ಕನ್ನಡ ಪರ ಸರ್ವ ಸಮ್ಮತ ಅಭಿಪ್ರಾಯ ಮೂಡುವಂತೆ ಕಾರ್ಯನಿರ್ವಹಿಸಿ.

ಏಕೆಂದರೆ.....

ಕರ್ನಾಟಕ ಎಂಬುದೇನು
ಹೆಸರೇ ಬರಿಯ ಮಣ್ಣಿಗೆ,
ಮಂತ್ರ ಕಣಾ ಶಕ್ತಿ ಕಣಾ
ತಾಯಿ ಕಣಾ ದೇವಿ‌ ಕಣಾ
ಬೆಂಕಿ ಕಣಾ ಸಿಡಿಲು ಕಣಾ
ಕಾವ ಕೊಲುವ ಒಲವ ಬಲವಾ
ಪಡೆದ ಚೆಲುವ ಚೆಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ,
ರಾಷ್ಟ್ರ ಕವಿ ಕುವೆಂಪು....

ತಾಯಿ ಭಾಷೆ ಉಳಿಯದಿದ್ದರೆ ನಮ್ಮ ಬದುಕು ಸಹಜವಾಗಿ ಉಳಿಯುವುದು ಕಷ್ಟ. ಅದು ಅಸಹಜವಾಗಿ ಬೆಳೆಯುತ್ತದೆ.
ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್‌ ತಂತ್ರಜ್ಞಾನದ ಇಂಟರ್ ನೆಟ್ ಎಂಬ ಮಾಹಿತಿಯ ಭಾಷೆ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ಸಮಯದಲ್ಲಿ ಸ್ವಲ್ಪ ಹಳೆಯ ಪೀಳಿಗೆಯ ಯಾವುದೇ ಕ್ಷೇತ್ರದ ದೊಡ್ಡ ದೊಡ್ಡ ವಿದ್ವಾಂಸರು, ಚಿಂತಕರು, ಜ್ಞಾನಿಗಳೇ ಈ ತಂತ್ರಜ್ಞಾನದ ಮುಂದೆ ಅನಕ್ಷರಸ್ಥರಂತೆ ಕಾಣುತ್ತಿದ್ದಾರೆ. ಕಾರಣ ಈ ಗ್ಯಾಜೆಟ್ ಭಾಷೆಯಲ್ಲಿ ಸಣ್ಣ ಮಕ್ಕಳೇ ನುರಿತವರಂತೆ ಉಪಯೋಗಿಸುತ್ತಾರೆ.

ನಾನು ಕಂಡಂತೆ ಮೊಬೈಲಿನಲ್ಲಿ ಎರಡು/ಮೂರು ವರ್ಷದ ಮಗು ಯೂಟ್ಯೂಬ್ ತಾನೇ ತೆಗೆದು ನೋಡುತ್ತದೆ. ಐದು ವರ್ಷದ ಮಗು ಸ್ವಿಗ್ಗಿ ಜೊಮೋಟೋ ಸ್ಲಿಪ್ ಕಾರ್ಟ್ ಅಮೆಜಾನ್ ಉಪಯೋಗಿಸಿಕೊಂಡು ಊಟ ತರಿಸಿಕೊಳ್ಳುತ್ತದೆ. ಕೆಲವರು ಅವರ ಅಪ್ಪ ಅಮ್ಮ ಅಜ್ಜ ಅಜ್ಜಿಗೆ ರೈಲ್ವೆ ಟಿಕೆಟ್, ಔಷಧಿ ಮತ್ತು ಇತರ ಅವಶ್ಯಕ ವಸ್ತುಗಳನ್ನು ಖರೀದಿಸಿ ಕೊಡುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಸುಲಭವಾಗಿ ಉಪಯೋಗಿಸುತ್ತಾರೆ. ಅಂದರೆ ಹೊಸ ಭಾಷೆ ಅಥವಾ ನಮ್ಮದಲ್ಲದ ಭಾಷೆ ಸೃಷ್ಟಿಯಾದಾಗ ಅದು ನಮ್ಮನ್ನು ಅನಾಥ ಪ್ರಜ್ಞೆಗೆ ದೂಡುತ್ತದೆ.

ಒಂದು ವೇಳೆ ನೀವು ಹೊಸ ಭಾಷೆಯನ್ನು ನಿಧಾನವಾಗಿ ಕಲಿಯಬಹುದು ಎಂದೇ ಭಾವಿಸಿ. ಆಗಲೂ ಸಹ ಸಂಪರ್ಕ ಸುಲಭವಾಗಬಹುದು. ಆದರೆ ಸ್ವಾಭಾವಿಕ ಸಂಸ್ಕೃತಿ ನಮ್ಮಿಂದ ಮರೆಯಾಗುತ್ತದೆ. ಬದುಕು ಅಸಹಜವೆನಿಸಿ ಭಾರವಾಗುತ್ತದೆ.
ಆದ್ದರಿಂದ ನಮ್ಮಗಳ ನಡುವೆ ಎಷ್ಟೇ ಸೈದ್ದಾಂತಿಕ ಭಿನ್ನಾಭಿಪ್ರಾಯ ಅಥವಾ ಇನ್ನೇನೆ ಅಭಿಪ್ರಾಯ ಭೇದಗಳು ಇದ್ದರೂ ದಯವಿಟ್ಟು ಕನ್ನಡ ತಾಯಿ ಭಾಷೆಯನ್ನು ಉಳಿಸೋಣ, ಬೆಳೆಸೋಣ ಮತ್ತು ಬದುಕಿನ ಭಾಗವಾಗಿ ಅಳವಡಿಸಿಕೊಳ್ಳೋಣ. ದಕ್ಷಿಣದ ಭಾಷೆಗಳಲ್ಲಿ ಕನ್ಬಡವೇ ಸ್ವಲ್ಪ ನಮ್ಮವರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಏಕೆಂದರೆ.......

ನಾನು ನಕ್ಕಾಗ ನಗಿಸಿದ್ದು ಕನ್ನಡ,
ನಾನು ಅತ್ತಾಗ ಅಳಿಸಿದ್ದು ಕನ್ನಡ,
ನಾನು ಪ್ರೀತಿಸಿದಾಗ ಮೂಡಿದ್ದು ಕನ್ನಡ,
ನಾನು ಪ್ರೇಮಿಸಿದಾಗ ಅರಳಿದ್ದು ಕನ್ನಡ,
ನಾನು ಕಾಮಿಸಿದಾಗ ಕನಲಿದ್ದು ಕನ್ನಡ,

ನನ್ನ ಖುಷಿಗೆ ಜೊತೆಯಾಗಿದ್ದು ಕನ್ನಡ,
ನನ್ನ ಕೋಪಕ್ಕೆ ಸೇರಿಕೊಂಡಿದ್ದು ಕನ್ನಡ,
ನನ್ನ ಖಿನ್ನತೆ ವ್ಯಕ್ತಪಡಿಸಿದ್ದು ಕನ್ನಡ,
ನನ್ನ ಭಕ್ತಿಯೂ ಕನ್ನಡ,
ನನ್ನ ಶಕ್ತಿಯೂ ಕನ್ನಡ
ನನ್ನ ಮುಕ್ತಿಯೂ ಕನ್ನಡ,

ನನ್ನಲ್ಲಿ ಅರಿವು ಮೂಡಿಸಿದ್ದು ಕನ್ನಡ,
ನನ್ನಲ್ಲಿ ಅಹಂಕಾರ ಬೆಳೆಸಿದ್ದೂ ಕನ್ನಡ,
ನನ್ನಲ್ಲಿ ಹೆಮ್ಮೆ ಬೆಳಗಿಸಿದ್ದೂ ಕನ್ನಡ,
ನನ್ನಲ್ಲಿ ಕೀಳರಿಮೆ ತಂದದ್ದೂ ಕನ್ನಡ,
ನನ್ನಲ್ಲಿ ಅಭಿಮಾನ ಸೇರಿಸಿದ್ದು ಕನ್ನಡ,

ನನಗೆ ದೃಷ್ಟಿಯಾಗಿ ಕಂಡದ್ದು ಕನ್ನಡ,
ನನಗೆ ಧ್ವನಿಯಾಗಿ ಕೇಳಿದ್ದು ಕನ್ನಡ,
ನನಗೆ ವಾಸನೆಯಾಗಿ ಗ್ರಹಿಸಿದ್ದು ಕನ್ನಡ,
ನನಗೆ ರುಚಿಯಾಗಿ ಸವಿದದ್ದು ಕನ್ನಡ,
ನನಗೆ ಸ್ಪರ್ಶವಾಗಿ ಮುಟ್ಟಿದ್ದು ಕನ್ನಡ,

ಮಾತು ಕಲಿಸಿದ್ದು ಕನ್ನಡ,
ವಿದ್ಯೆ ನೀಡಿದ್ದು ಕನ್ನಡ ,
ಉದ್ಯೋಗ ದೊರಕಿಸಿದ್ದು ಕನ್ನಡ,
ಬದುಕು ದಯಪಾಲಿಸಿದ್ದು ಕನ್ನಡ,
ನಮ್ಮ ನಿಮ್ಮ ಗೆಳೆತನಕ್ಕೆ ಸಾಕ್ಷಿಯಾದದ್ದು ಕನ್ನಡ,

ನಾನು ಕನ್ನಡ - ನೀವೂ ಕನ್ನಡ,
ಅವನೂ ಕನ್ನಡ - ಅವಳೂ ಕನ್ನಡ,
ಎಲ್ಲವೂ ಕನ್ನಡ - ಎಲ್ಲರೂ ಕನ್ನಡ,
ಎಲ್ಲೆಲ್ಲೂ ಕನ್ನಡ - ಎಂದೆಂದೂ ಕನ್ನಡ,
ನಮ್ಮೆಲ್ಲರ ಜೀವನವೇ,

ಕನ್ನಡ ಕನ್ನಡ ಕನ್ನಡ........

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068......

25/10/2024

ಸರ್ಕಸ್ ಅಲ್ಲಿ ಪ್ರಾಣಿಗಳು ಮಾಯಾವಾಗಿವೆ..
ಆದ್ರೆ ಇಲ್ಲಿ ಟಿವಿ ಷೋ ಗಳಲ್ಲಿ ಮನುಷ್ಯರೇ ಪ್ರಾಣಿಗಳಿಗಿಂತ ಹೀನಾಯವಾಗಿ ಬಳಸಿಕೊಳ್ಳುತ್ತಿದ್ದಾರೆ😢!

Vergin cocunut oil doctor organic
18/09/2024

Vergin cocunut oil doctor organic

oil

14/09/2024
ಅಕ್ಷರ ಸಾಹಿತ್ಯ,ಅನುಭವ ಸಾಹಿತ್ಯ,ಅನುಭಾವ ಸಾಹಿತ್ಯ..........ಅಕ್ಷರ ಸಾಹಿತ್ಯ......***************ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದ...
29/08/2024

ಅಕ್ಷರ ಸಾಹಿತ್ಯ,
ಅನುಭವ ಸಾಹಿತ್ಯ,
ಅನುಭಾವ ಸಾಹಿತ್ಯ..........

ಅಕ್ಷರ ಸಾಹಿತ್ಯ......
***************

ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು ಇತ್ಯಾದಿ ಎಲ್ಲಾ ಪ್ರಕಾರದ ಬರಹಗಳನ್ನು ಮೂಡಿಸುತ್ತಾ ಹೋಗುವುದು. ತನಗೆ ತಿಳಿದಿರುವ ಅಥವಾ ತನ್ನ ಜ್ಞಾನದ ಮಿತಿಯಲ್ಲಿ ಬರೆಯುವುದು. ಇದರಲ್ಲಿ ಅಕ್ಷರದ ಅಥವಾ ಪದಗಳ ಲಾಲಿತ್ಯವೇ ಮೇಲುಗೈ ಪಡೆದಿರುತ್ತದೆ ಜೊತೆಗೆ ತನ್ನ ಬುದ್ದಿಯ ಪ್ರದರ್ಶನವೂ ಸೇರಿರುತ್ತದೆ. ನನ್ನ ವೈಯಕ್ತಿಕ ಅನಿಸಿಕೆಯ ಪ್ರಕಾರ ಇದರಲ್ಲಿ ಹೆಚ್ಚು ಜೀವ ಇರುವುದಿಲ್ಲ. ಒಣ ಅಥವಾ ಶುಷ್ಕ ವಾತಾವರಣದ ರೀತಿಯಲ್ಲಿ ಈ ಬರಹಗಳು ಇರುತ್ತವೆ. ಇದರಲ್ಲಿ ಹೆಚ್ಚು ಆಳವಾದ ಅಥವಾ ಅಧ್ಯಯನದ ಒಳ ಅರ್ಥಗಳು ಗೋಚರಿಸುವ ಸಾಧ್ಯತೆ ಕಡಿಮೆ. ನಿರೂಪಣೆಯೇ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ಅನುಭವ ಸಾಹಿತ್ಯ......
***********************

ಅಕ್ಷರ ಜ್ಞಾನದ ಜೊತೆಗೆ ಬದುಕಿನ ಅನುಭವದ ಆಧಾರದ ಮೇಲೆ ಬರೆಯುವ ಪ್ರಕಾರ. ಅಂದರೆ ಇಲ್ಲಿ ಅನುಭವಗಳಿಗೆ ಅಕ್ಷರದ ರೂಪ ನೀಡುವುದು. ಒಂದಷ್ಟು ಅಧ್ಯಯನ ಚಿಂತನೆಗಳು ಇಲ್ಲಿ ಅಡಕವಾಗಿರುವ ಸಾಧ್ಯತೆ ಇರುತ್ತದೆ. ಬರೆಯುವ ತುಡಿತ ಹೆಚ್ಚಾಗಿರುತ್ತದೆ. ಆ ಅಕ್ಷರಗಳಲ್ಲಿ ಜೀವಂತಿಕೆಯ ಲಕ್ಷಣಗಳನ್ನು ಗುರುತಿಸಬಹುದು.

ಅಕ್ಷರಗಳಿಂದ ಅನುಭವದ ರೂಪ ಕೊಡುವುದಕ್ಕಿಂತ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಹಿತ್ಯಿಕವಾಗಿ ಉತ್ತಮ ಗುಣಮಟ್ಟವನ್ನು ಮುಟ್ಟಲು ಸಾಧ್ಯವಾಗುತ್ತದೆ.

ಅನುಭಾವ ಸಾಹಿತ್ಯ...
*********************

" ರವಿ ಕಾಣದ್ದನ್ನು ಕವಿ ಕಂಡ " ಎಂಬ ನಾಣ್ಣುಡಿಯನ್ನು ಇದು ನೆನಪಿಸುತ್ತದೆ. ಅಕ್ಷರ ಜ್ಞಾನದ ಜೊತೆಗೆ ಅನುಭವವೂ ಸೇರಿ ಅದರಿಂದ ಮೇಲೇರಿ ಇನ್ನಷ್ಟು ಆಳವನ್ನು ಹುಡುಕುತ್ತಾ ಒಳನೋಟಗಳನ್ನು, ವಿವಿಧ ಮುಖಗಳನ್ನು ಗ್ರಹಿಸುತ್ತ, ಬರೆಯುತ್ತಾ ಹೋಗುವುದು ಅನುಭಾವ ಸಾಹಿತ್ಯ ತುಂಬಾ ಸೂಕ್ಷ್ಮ ಮತ್ತು ದೂರ ದೃಷ್ಟಿ ಇದರಲ್ಲಿ ಸಿಗುತ್ತದೆ. ಅಧ್ಯಯನ ಮತ್ತು ಚಿಂತನೆಯೂ ಇಲ್ಲಿ ಅಡಕವಾಗಿರುತ್ತದೆ. ಇದರಲ್ಲಿ ಜೀವ ಮೈತುಂಬಿ ಹರಿಯುತ್ತದೆ..

ಬರಹಗಳಲ್ಲಿ ಸಹ ಗುಣಮಟ್ಟವನ್ನು ಅಳೆಯಬಹುದು. ಅನೇಕ ಬರಹಗಳು ಕಾಲದ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಈಗಲೂ ಪ್ರಸ್ತುತವಾಗಿ ಉಳಿದಿರುವುದಕ್ಕೆ ಕಾರಣ ಅವುಗಳ ಆಳದಲ್ಲಿ ಇರುವ ಅನುಭಾವ.

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಅನೇಕ ಬರಹಗಾರರು ಸೃಷ್ಟಿಯಾಗಿದ್ದಾರೆ. ಸಾಹಿತ್ಯ ರಚಿಸಲು ಜನಸಾಮಾನ್ಯರಿಗೆ ಒಂದು ಅತ್ಯುತ್ತಮ ವೇದಿಕೆ ದೊರೆತಿದೆ.
ಆದರೆ ಅದು ಅಕ್ಷರ ಸಾಹಿತ್ಯ ದಾಟಿ ಅನುಭವ ‌ಸಾಹಿತ್ಯ ಮೀರಿ ಅನುಭಾವ ಸಾಹಿತ್ಯವಾಗಲಿ ಎಂಬುದು ಒಂದು ಆಶಯ.

ನಿಜವಾದ ಸಾಹಿತ್ಯ ಮಾನವೀಯತೆಯ ವಿಕಾಸವಾದದ ಕುರುಹುಗಳಾಗಿ ಉಳಿಯಬೇಕೇ ಹೊರತು ಶಿಕ್ಷಣ ಆಧಾರಿತ ಮಾನವೀಯ ಮೌಲ್ಯಗಳ ವಿನಾಶದ ಮಾರ್ಗವಾಗಬಾರದು.............
ಇದೊಂದು ಸರಳ ನಿರೂಪಣೆ. ಸಾಹಿತ್ಯದ‌ ಆಳ ಅಗಲಗಳು ಅನಂತ........

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068.......

Address

Banashankri
Bangalore
560070

Alerts

Be the first to know and let us send you an email when Suddi Manthana - ಸುದ್ದಿ ಮಂಥನ posts news and promotions. Your email address will not be used for any other purpose, and you can unsubscribe at any time.

Contact The Business

Send a message to Suddi Manthana - ಸುದ್ದಿ ಮಂಥನ:

Share