Krushi Udhyog

Krushi Udhyog Agriculture information,intigrated farming , agricultural Technologies,and direct marketing for agri

23/08/2020

ನಿಮ್ಮನೆ ಅಕ್ಕಪಕ್ಕ ಸೀಲ್ ಡೌನ್ ನೆಪದಲ್ಲಿ ಬ್ಯಾರಿಕೇಡ್ ಹಾಕಿ ನಾಲ್ಕು ಬೊಂಬು ಕಟ್ಟಿದ್ರು ಅಂದ್ರೆ.. ಲಕ್ಷ ರೂಪಾಯಿಗಿಂತ ಹೆಚ್ಚು ಬಿಲ್ ಮಾಡಿಕೊಳ್ಳಬಹುದು ನೆನಪಿರಲಿ!

ದಾರಿಯಲ್ಲಿ ಹೋಗ್ತಿರೋರನ್ನೆಲ್ಲಾ ನಿಲ್ಲಿಸಿ, ಫ್ರೀ ಟೆಸ್ಟ್ ಮಾಡ್ತಿದ್ದೀವಿ, ಮಾಡಿಸಿಕೊಂಡು ಹೋಗಿ ಅಂತ ಒತ್ತಾಯಿಸ್ತಿದ್ದಾರೆ ಅಂದ್ರೆ.. ಆರಾಮಾಗಿರೋರಿಗೂ ಕೊರೋನ ಪಟ್ಟ ಕಟ್ಟಿ ಚಿಕಿತ್ಸೆ ಕೊಡಿಸಲು ಶ್ರಮಿಸ್ತಿದ್ದಾರೆ. ಇದರ ಹಿಂದೆ ಏನಿರಬಹುದು ನಿಮ್ಮ ಊಹೆಗೆ ಬಿಟ್ಟ ವಿಷಯ!

ಸರ್ಕಾರಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿ ಬರ್ತಿರುವವರ ಹತ್ರ ಆಯುಷ್ಮಾನ್ ಭವ ಸ್ಕೀಮ್ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಿಲ್ ಗಳಿಗೆ ಸಹಿ ಮಾಡಿಸಿಕೊಂಡು ಕಳಿಸ್ತಿದ್ದಾರೆ ಎಂಬುದು ನಿಮ್ಮ ಗಮನದಲ್ಲಿರಲಿ!

No 1 ಸ್ಥಾನದಲ್ಲಿದ್ದ ದೆಹಲಿ ಕೊನೆ ಸ್ಥಾನದತ್ತ ಮುಖಮಾಡಿದೆ. ಹದಿನೈದನೇ ಸ್ಥಾನದಲ್ಲಿದ್ದ ಕರ್ನಾಟಕ ಮೊದಲನೇ ಸ್ಥಾನದತ್ತ ದಾವಿಸ್ತಿದೆ! ಸಂಖ್ಯೆ ಜಾಸ್ತಿಯಾದಷ್ಟೂ ಸಂಪಾದನೆ ಜಾಸ್ತಿ ಆಗುತ್ತೆ ಅನ್ನೋ ಜ್ಞಾನೋದಯ ಆಗಿರುವುದರ ಸೂಚನೆ ಇದು!

ಖಾಸಗಿ ಆಸ್ಪತ್ರೆಗಳು ನೇರ ದಾಖಲಾತಿಗಿಂತ ಸರ್ಕಾರದ ವತಿಯಿಂದ ಕಳುಹಿಸಿಕೊಡುವ ರೋಗಿಗಳನ್ನು ಹೆಚ್ಚಾಗಿ ದಾಖಲಿಸಿಕೊಳ್ಳುತ್ತಿವೆ. ಏಕೆಂದರೆ ದುಡ್ಡು ಕೊಡುವುದರಲ್ಲಿ ನಮಗಿಂತ ಸರ್ಕಾರವೇ ಉತ್ತಮ ಅಂತ ಅವರು ನಂಬಿದ್ದಾರೆ.

ಕಳೆದ ವಾರ ನಾನು ಕರೆ ಮಾಡಿದವರಲ್ಲಿ ಬಹುತೇಕರಿಗೆ ನೆಗಡಿ ಇತ್ತು.. ಕೆಲವರಿಗೆ ಕೆಮ್ಮು ಇತ್ತು! ಅವರೆಲ್ಲಾ ಪ್ರತಿವರ್ಷ ಬರುವ ಕೆಮ್ಮು, ನೆಗಡಿಯನ್ನು ಟ್ರೀಟ್ ಮಾಡಿದಂತೆ ಮಾಡಿಕೊಂಡಿದ್ದಾರೆ. ಈಗ ಅವರೆಲ್ಲರೂ ಸರಿ ಹೋಗಿದ್ದಾರೆ. ಅಂದ್ರೆ ಎಲ್ಲಾ ಕೆಮ್ಮು, ನೆಗಡಿ ಕೊರೋನ ಅಲ್ಲ! ಗಂಟಲು ಉರಿ ಇದ್ದಂತಹ ಸ್ನೇಹಿತರೊಬ್ಬರು ನಾಲ್ಕು ಮೆಣಸು ಮತ್ತು ಒಂದು ಉಪ್ಪು ಕಲ್ಲನ್ನು ತಿಂದು ಅದರ ರಸ ಹೀರುತ್ತಾ ಮಲಗಿದ್ದಾರೆ. ಬೆಳಿಗ್ಗೆಯೊಳಗೆ ಗಂಟಲು ಉರಿ ಮಾಯವಾಗಿದೆ! ಅಂದ್ರೆ ಗಂಟಲು ಉರಿ ಬಂದ ಮಾತ್ರಕ್ಕೆ ಭಯಪಡಬೇಕಿಲ್ಲ! ನೆನಪಿರಲಿ..

ಈ ಕೊರೋನ ಜೊತೆ ಜೊತೆಗೆ ಚೀನಾದಲ್ಲಿ ಮತ್ತೊಂದೆರೆಡು ವೈರಸ್ , ಮಲೇಶಿಯಾದಲ್ಲೊಂದು ವೈರಸ್ ಕಾಣಿಸಿಕೊಂಡಿವೆಯಂತೆ! ಇವು ಕೊರೋನಗಿಂತ ಹತ್ತುಪಟ್ಟು ಬಲಿಷ್ಠವಾಗಿವೆಯಂತೆ.. ಅಂದ್ರೆ ಕೊರೋನ ಮುಗಿದ್ರೂ ವೈರಸ್ ಗಳ ಪರ್ವ ಮುಗಿಯಲ್ಲ. ಇನ್ಮೇಲೆ ನಮ್ಮ ಬದುಕು ವೈರಸ್ ಗಳ ಜೊತೆಗೆ ಶತಃಸಿದ್ಧ ಎಂಬ ಮೈಂಡ್ ಸೆಟ್ ನಿಮ್ಮದಾಗಲಿ.

ರಾತ್ರಿ ಹೊತ್ತು ಮನೆಗೆ ಹುಷಾರಾಗಿ ತಲುಪಿ ಏಕೆಂದರೆ.. ಕೊರೋನಗಿಂತ ತೀವ್ರವಾಗಿ ಸುಲಿಗೆಗಳು ನಡೀತಿವೆ.

ಹೊರಗಡೆ ಹೋಗೋ ಮುಂಚೆ, ಸರ್ಕಾರ, ಆಸ್ಪತ್ರೆಗಳು ನಮ್ಮನ್ನು ಕಾಪಾಡ್ತಾರೆ ಅನ್ನೋ ಭ್ರಮೆ ಬಿಟ್ಟುಬಿಡಿ.! ಎಲ್ಲಾ ಹೋದ್ರೂ ನಾವು ಮಾತ್ರ ಸಾವಿರ ವರ್ಷ ಬದುಕಿರ್ತೀವಿ ಅಂತ ಅವರು ನಂಬಿದ್ದಾರೆ! ಆದ್ದರಿಂದ ಧರ್ಮ, ಕರ್ಮ ಮರೆತು ಸಾವಿರ ವರ್ಷಕ್ಕಾಗುವಷ್ಟು ಸಂಪಾದನೆಗೆ ಇಳಿದಿದ್ದಾರೆ! ಆದ್ದರಿಂದ ಹೊರಗಡೆ ಹೋದಾಗ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಎಲ್ಲಕ್ಕಿಂತ ಮುಖ್ಯವಾಗಿ ಅಂತರ ಕಾಪಾಡಿಕೊಳ್ಳಿ ಸಾಕು! ಏಕೆಂದರೆ ಸಾವು ಬಂದಾಗ ಸಾಯೋಣ! ಯಾರೋ ಸಾಯ್ಸೋವಾಗ ಯಾಕ್ ಸಾಯೋಣ?
***************************************************

ಈ ಭಯ ಹುಟ್ಟಿಸುವ ಪರಿಸ್ಥಿತಿಯಲ್ಲಿ ಬೇಂದ್ರೆಯವರ ಈ ಮಾತು ನೆನಪಲ್ಲಿರಲಿ.. "ಸಾವಿಗೆ ನಾನು ಹೆದರುವುದಿಲ್ಲ, ಯಾಕಂದರ ನಾ ಇರೋತನಕ ಅದು ಬರೋದಿಲ್ಲ. ಅದು ಬಂದಾಗ ನಾ ಇರೋದಿಲ್ಲ"..

23/08/2020

ಎರೆಹುಳು ಏನು ಮಾಡುತ್ತೆ ಗೊತ್ತಾ?
ನಿಮಗೆ ಆಶ್ಚರ್ಯ ಆಗಬಹುದು, ಒಂದು ಅತ್ಯಂತ ಫಲವತ್ತಾದ ಜಮೀನಿನ ಕೆಳಗೆ ಒಂದು ಚದುರ ಭೂಮಿಯಲ್ಲಿ 16 ಎರೆಹುಳುಗಳು ಇರುತ್ತವೆ! ಮಣ್ಣಿನ ಅಡಿಯಲ್ಲಿ ಬಿಡುವಿಲ್ಲದೇ ದುಡಿಯುತ್ತಿರುತ್ತವೆ. ವಾರದ ರಜೆ, ಸಂಬಳ, ವಿಶೇಷ ಭತ್ಯೆ ಏನೂ ತಗೆದುಕೊಳ್ಳದೇ ನಮ್ಮ ಜಮೀನನ್ನು ಉಳುಮೆ ಮಾಡುತ್ತಿರುತ್ತವೆ.
ಒಂದು ಎರೆಹುಳು ಒಂದು ದಿನಕ್ಕೆ ತನ್ನ ದೇಹದ ತೂಕದ ಒಂದೂವರೆ ಪಟ್ಟು ಹೆಚ್ಚು ತೂಕದ ಮಣ್ಣನ್ನು ಅಗೆದು ಹೊರಹಾಕುತ್ತವೆ! ಒಂದು ಎಕರೆಯಲ್ಲಿ ಅಂದಾಜು ಒಂದು ಲಕ್ಷ ಎರೆಹುಳುಗಳು ಇದ್ದಾವೆ ಎಂದು ಲೆಕ್ಕ ಹಾಕಿದರೂ, ಅವುಗಳ ತೂಕ ಸುಮಾರು ಒಂದು ಟನ್. ಇಷ್ಟು ಹುಳುಗಳು ದಿನವೊಂದಕ್ಕೆ ಒಂದೂವರೆ ಟನ್‌ನಷ್ಟು ಮಣ್ಣನ್ನು ಅಗೆಯುತ್ತವೆ. ಹಾಗೆ ಮಣ್ಣು ತಿಂದು ಮಲವಿಸರ್ಜನೆ ಮಾಡಲು ಪ್ರತಿ ರಾತ್ರಿ ಒಂದು ಎರೆಹುಳು ಎಂಟು ಸಲ ಭೂಮಿಯ ಮೇಲ್ಭಾಗಕ್ಕೆ ಬರುತ್ತದೆ! ಪ್ರತಿ ಬಾರಿ ಅದು ಬೇರೆ ಬೇರೆ ದಾರಿಯಲ್ಲೇ ಹೊರಬರುತ್ತದೆ! ಹಾಗೆಯೇ ಬೇರೆ ಹಾದಿಯಲ್ಲಿ ಒಳಹೋಗುತ್ತದೆ!
ಅಂದರೆ ಲೆಕ್ಕ ಹಾಕಿ,
ಒಂದು ರಾತ್ರಿ ಒಂದು ಎರೆಹುಳು ಭೂಮಿಗೆ 14 ರಿಂದ 18 ರಂಧ್ರಗಳನ್ನು ಕೊರೆಯುತ್ತದೆ. ಒಂದು ಅಡಿ ಜಾಗದಲ್ಲಿ 10 ಎರೆ ಹುಳುಗಳಿದ್ದರೆ ಅಲ್ಲಿ ಸುಮಾರು 180 ರಂಧ್ರಗಳಾಗುತ್ತವೆ!
600 ಕೋಟಿ ವರ್ಷಗಳಿಂದ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಗಳಲ್ಲೂ ಎರೆಹುಳು ಬದುಕುಳಿದು ತನ್ನ ಆಸ್ತಿತ್ವವನ್ನು ಕಾಯ್ದುಕೊಂಡಿದೆ. ಭೂಮಂಡಲದ 100 ಜೀವಜಂತುಗಳ ಪೈಕಿ ಅತ್ಯಂತ ಯಶಸ್ವಿ ಜೀವಿಯಾಗಿದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ದೇಶಿ ಎರೆಹುಳು ಮಣ್ಣನ್ನು ತಿನ್ನುತ್ತಾ 15ರಿಂದ 25 ಅಡಿ ಆಳಕ್ಕೆ ಹೋಗಿ ಬಂದು ದಿನದ 24 ಗಂಟೆಯೂ ಅವಿಶ್ರಾಂತವಾಗಿ ದುಡಿಯುತ್ತದೆ. ಇದರಿಂದ ಮಣ್ಣಿನ ಮೂಲಕ ಭೂಮಿಯ ಒಳಭಾಗಕ್ಕೆ ಗಾಳಿ ಹರಿಯುತ್ತದೆ. ಗಿಡಗಳ ಬೇರಿಗೆ ನೀರು ಒಸರುತ್ತದೆ. ಎರೆಹುಳುವಿನ ಮಲ ನಮ್ಮ ಬೆಳೆಗಳಿಗೆ ಉತ್ಕೃಷ್ಟ ಗೊಬ್ಬರವೂ ಆಗುತ್ತದೆ.
ಹಾಗಾಗಿ ಯಾವಾಗಲೂ ಜಮೀನಿಗೆ ಬೆಂಕಿ ಇಡಬಾರದು, ಕೀಟನಾಶಕ, ಕಳೆನಾಶಕ ಅಥವ ಯಾವುದೇ ರಸಾಯನಿಕ ಬಳಸಬಾರದು ಇರೋದನ್ನು ಬೆಳಸಿಕೊಂಡು ಹೋಗಬೇಕು .ಎರೆಹುಳುವಿನ ಸಂತತಿ ಉಳಿಸಬೇಕಾದರೆ ಸಾವಯವ ರಸಗೊಬ್ಬರವನ್ನು ನಾವು ಬಳಸೋಣ.

E-Krushi

ಸರ್ವರಿಗೂ 74ನೇ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು, ನಮ್ಮ ದೇಶ,ಭಾಷೆ,ಸಂಸ್ಕೃತಿ,ಪುರಾತನ ಇತಿಹಾಸದ ಬಗ್ಗೆ ಗರ್ವಿಸೋಣ... ದೇಶದ ಸ್ವಾತಂತ್ರ್ಯಕ...
14/08/2020

ಸರ್ವರಿಗೂ 74ನೇ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು, ನಮ್ಮ ದೇಶ,ಭಾಷೆ,ಸಂಸ್ಕೃತಿ,ಪುರಾತನ ಇತಿಹಾಸದ ಬಗ್ಗೆ ಗರ್ವಿಸೋಣ... ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಸ್ವಾತಂತ್ರ್ಯ ವೀರರ ತ್ಯಾಗ-ಬಲಿದಾನಗಳನ್ನೂ ಸ್ಮರಿಸೋಣ.. ಸ್ವಾತಂತ್ರವನ್ನು ಸ್ವೇಚ್ಛೆಯಾಗಿಸದೆ, ಸಮ್ಮಿಲಿತಗೊಳಿಸಿಕೊಳ್ಳೋಣ... ಕೇವಲ ಹಕ್ಕುಗಳನ್ನು ಅಷ್ಟೇ ಕೇಳದೆ ಕರ್ತವ್ಯಗಳನ್ನು ಶಿರಸಾವಹಿಸಿ ಪಾಲಿಸೋಣ...

#ಮೇರಾ_ಭಾರತ್_ಮಹಾನ್

30/07/2020

hi.ನೀವು ಓದಲೇ ಬೇಕು. ನಿಮ್ಮ ಮಕ್ಕಳ ಭವಿಷ್ಯ ಮತ್ತೆ ನಿಮ್ಮ ಭವಿಷ್ಯ ಸುಧಾರಿಸಲು.
1ನೇ ತರಗತಿ ಶಾಲೆಯ ಪೀಜ 10 ಸಾವಿರ.
ಶಾಲೆಯ ವಾಹನದ ಬಾಡಿಗೆ 4ಸಾವಿರ.
2ನೇ ತರಗತಿಯಿಂದ ಕರ್ಚು ಜಾಸ್ತಿ ಆಗುತ್ತಾ ಬರುತ್ತದೆ.
ನೀವು 10ನೇ ತರಗತಿ ಬರುವಷ್ಟರಲ್ಲಿ ಸುಮಾರು 3ಲಕ್ಷ ಹಣ ಕರ್ಚ ಆಗುತ್ತದೆ. ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುತ್ತಿರಾ. ನಿಮ್ಮ ಮನೆಯ ಮುಂದೆ ಇರುವ ಹುಡುಗನ ಮಾತು ಕೇಳಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿರಾ ಅಲ್ಲಿ ನೀವು 12ನೇ ತರಗತಿ ಮುಗಿಸುವಷ್ಟರಲ್ಲಿ 4 ರಿಂದ 5ಲಕ್ಷ ಕರ್ಚ ಆಗುತ್ತದೆ. ಆ ಮೇಲೆ ಉನ್ನತ ಅಭ್ಯಾಸಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ಹೋಗಬೇಕಾಗುತ್ತದೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಲೆಕ್ಕಿಸದೇ ನೀವು ಮಾಡುತ್ತೇನೆ ಅಂತಾ ಹೋಗತ್ತಿರಾ. ಅಲ್ಲಿ ನಿಮ್ಮ ಕರ್ಚು 10 ರಿಂದ 15 ಲಕ್ಷ ಬರುತ್ತದೆ. ಆ ಮೇಲೆ ಉತ್ತೀರ್ಣರಾಗುತ್ತಿರಿ. ಅಷ್ಟರಲ್ಲಿ ನಿಮ್ಮ ವಿಧ್ಯಾಭ್ಯಾಸದ ಕರ್ಚು 25ಲಕ್ಷ.
ಕೆಲಸದ ಒತ್ತಡ ಮಗನಿಗೆ ಎಲ್ಲೂ ಕೆಲಸವಿಲ್ಲಾ ಅಂತಾ ತಂದೆ ಮತ್ತೆ O.T ಓವರ ಟೈಮ ಕೆಲಸಮಾಡುತ್ತಾರೆ. ತಾಯಿ ಎನ ಮಾಡೋದು ಇದ್ದ ಒಡವೆ ಎಲ್ಲಾ ಮಾರಿ ಮಗನಿಗೆ ವಿಧ್ಯಾಭ್ಯಾಸ ಕಲಿಸಿದೆ ಅಂತಾ ತಾಯಿಯ ಚಿಂತೆ. ಕೆಲಸ ಸಿಗಲಿಲ್ಲಾ ಅಂತಾ ಮಗ ಕುಡಿತದ ಕಡೆ ಲಕ್ಷ ಕೊಡುತ್ತಾನೆ. ಅಲ್ಲಿಗೆ ಪೂರ್ತಿ ದಾರಿ ತಪ್ಪಿ ಬೀಡುತ್ತೇ. ಅಷ್ಟರಲ್ಲೆ ಒಂದು ಕಂಪನಿ ಕೆಲಸಕ್ಕೆ ಕರಿಯುತ್ತದೆ. ಮೊದಲಿಗೆ ಸಂಬಳ 10ಸಾವಿರ ತಂದೆ ತಾಯಿ ತುಂಬಾ ಖುಷಿ ಪಡುತ್ತಾರೆ. ಆದರೆ ಅವರು ಲೆಕ್ಕಿಸಲಿಲ್ಲಾ ಮಗನಿಗೆ 25ಲಕ್ಷ ಕರ್ಚುಮಾಡಿ ವಿದ್ಯಾಭ್ಯಾಸ ಕಲಿಸಿದ್ದೇವೆ ಅಂತಾ. ಅವರು ಮಗನ ಭವಿಷ್ಯ ನೋಡುತ್ತಾರೆ. ಒಂದು ವರ್ಷಕ್ಕೆ 1.20.000 ಹಾಗೆ ಮುಂದಿನ ವರ್ಷ 15 ಸಾವಿರ ಸಂಬಳವಾಗುತ್ತದೆ. 1.80.000 ವರ್ಷಕ್ಕೆ. ಹೀಗೆ ದುಡಿಯುತ್ತಾ ಹೋಗುತ್ತಾನೆ. ಮನೆಯಲ್ಲಿ ತಂಗಿಯ ಮದುವೆ ಬರುತ್ತದೆ. ಅಪ್ಪನ ಕುಡಿಟ ಹಣ ತಂಗಿಯ ಮದುವೇ ಮಾಡುತ್ತಾರೆ. ಹಾಗೆ ಇವನ ಮದುವೆಯು ಸಹ ಮಾಡುತ್ತಾರೆ. ಇವನ ವಯಸ್ಸು 25 ಆಗಿರುತ್ತದೆ. ಆ ಮೇಲೆ ಇವನ ಸರಾಸರಿ ಸಂಬಂಳ
ವರ್ಷಕ್ಕೆ 2ಲಕ್ಷ 50 ಸಾವಿರ.
ಹತ್ತು ವರ್ಷಕ್ಕೆ 25 ಲಕ್ಷ ಕಂಪನಿಯಿಂದ ಸಂಬಳ ತೆಗೆದುಕೊಳ್ಳುತ್ತಾನೆ. ಆಗ ಇವನಿಗೆ ವಯಸ್ಸು 40. ಆಗ ಕಂಪನಿ ಇವನಿಗೆ ನಿನಗೆ ವಯಸ್ಸು ಆಗಿದೆ ನಿನು ಇನ್ನ ಮುಂದೆ ಕೆಲಸಕ್ಕೆ ಬರಬೇಡ ಎಂದ ಕೆಲಸದಿಂದ ಬೀಡಿಸಿ ಬೀಡುತ್ತಾರೆ. ತಂದೆಗೆ ತಕ್ಕ ಮಗನಾಗಲಿಲ್ಲಾ ಅಂತಾ ಅವನಿಗೆ ಮತ್ತಷ್ಟು ಬೇಜಾರ ಜೀವನದಲ್ಲಿ ಏನು ಇಲ್ಲಾ ನಾಚಿಕೆ ಮಾನ ಮರ್ಯಾದೆ ಅಂತಾ ಅಂಜಿ ಅಂಜಿ ಜೀವನ ಮಾಡಬೇಕಾಗುತ್ತದೆ. ಅವೆಲ್ಲಾ ಬಿಟ್ಟು ಕನ್ನಡ ಶಾಲೆಯಲ್ಲಿ ಕಲೆತು ರೈತನಾದರೆ ಕೋಟಿ ಕೋಟಿ ಖಾತೆಯಲ್ಲಿ.👆
ತುಪ್ಪ ತುಟ್ಟಿಯಿದೆ ಪೇಟ್ರೋಲಗಿಂತಾ.
ಸಗಣಿ ಗೊಬ್ಬರ ತುಟ್ಟಿಯಿದೆ ಬಂಗಾರಕ್ಕಿಂತ.
ಮಾಂಸ ತುಟ್ಟಿಯಿದೆ ಮಾನ ಮರ್ಯಾದೆಗಿಂತ.
ಕುರಿ ಕೋಳಿ ಹಸು ಎಮ್ಮೆ ಸಾಕು ಆಗು ನೀ ರೈತಾ
ಆಗು ನೀ ಶ್ರೀಮಂತ👆
ನಾನೊಬ್ಬ ಹೊಸ ಕವಿ ಅಲ್ಲಾ.
ನಾನೊಬ್ಬ ನಗರಸಭೆ ಅಧ್ಯಕ್ಷ ಅಲ್ಲಾ.
ನಾನೊಬ್ಬ ಎಂ ಎಲ್ ಎ ಅಲ್ಲಾ.
ನಾನೊಬ್ಬ ಶ್ರೀಮಂತನು ಅಲ್ಲಾ.
ನಾನೊಬ್ಬ ನಿಮಗೆಲ್ಲಾ ದಾರಿ ದೀಪ ಆಗಬೇಕ ಅಂತಾ ಆಸೆ.
ಕೋಟಿ ಸಂಪಾದನೆ ಮಾಡಬೇಕಂತಿಲ್ಲಾ.
ಕೋಟಿ ಜನರನ್ನು ಸಂಪಾದನೆ ಮಾಡಬೇಕಂತಿದೆ.
ನಾ ಸತ್ತರೆ ಯಾಕ ಸತ್ತಾ ಅಂತಾ ಒಬ್ಬ ಜನಾ ಆದರು ಕಣ್ಣೀರ ಹಾಕಬೇಕು. ಆ ವ್ಯಕ್ತಿ ಅನಬೇಕು ಆ ಸಾವು ನನಗ ಬಂದರ ಒಳ್ಳೆಯದ ಇರತ್ತಿತ್ತು. ನನಗಾ ಯಾಕ ಬರಲಿಲ್ಲಾ ಅಂತಾ ಅನಬೇಕು.
ನಾ ಮಾಡುವ ಸಂಪಾದನೆ 60% ನಮ್ಮೂರಿನ ಶಿಕ್ಷಣಕೊಸ್ಕರ. ಇನ್ನು 40% ನನ್ನ ಕುಟುಂಬಕೊಸ್ಕರ.
ಕೋಟಿ ಹಣಬೇಡ ತಿನ್ನಲು ಅನ್ನವೇ ಸಾಕು.
ಮೈ ಮೇಲೆ ಬಂಗಾರ ಬೇಡಾ ಉಡಲು ಬಟ್ಟೆ ಸಾಕು.
🙏🙏🙏🙏🙏 ನನ್ನ ಕನಸು

"ರೈತನ ಮಗ ರೈತನಾಗಲು ಹಿಂಜರಿಯುವ ದೇಶದಲ್ಲಿ..."ಮೊನ್ನೆ ನಟ ಅನಂತ್‌ನಾಗ್‌ ಮಾತಾಡುತ್ತಾ ಗಂಭೀರವಾದ ಪ್ರಶ್ನೆಯೊಂದನ್ನು ಮುಂದಿಟ್ಟರು. ನಮ್ಮ ದೇಶದಲ...
19/04/2020

"ರೈತನ ಮಗ ರೈತನಾಗಲು ಹಿಂಜರಿಯುವ ದೇಶದಲ್ಲಿ..."

ಮೊನ್ನೆ ನಟ ಅನಂತ್‌ನಾಗ್‌ ಮಾತಾಡುತ್ತಾ ಗಂಭೀರವಾದ ಪ್ರಶ್ನೆಯೊಂದನ್ನು ಮುಂದಿಟ್ಟರು. ನಮ್ಮ ದೇಶದಲ್ಲಿ ಮಂತ್ರಿಗಳ ಮಕ್ಕಳು ಮಂತ್ರಿಗಳೇ ಆಗಲು ಬಯಸುತ್ತಾರೆ. ನಟರ ಮಕ್ಕಳು ನಟರಾಗಲು ಇಚ್ಚಿಸುತ್ತಾರೆ. ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ಆದರೆ ರೈತರ ಮಕ್ಕಳು ರೈತರಾಗೋದಕ್ಕೆ ಹಿಂಜರಿಯುತ್ತಿದ್ದಾರೆ. ನಾನು ರೈತನಾಗಲಾರೆ ಅಂತ ಹೇಳುತ್ತಿದ್ದಾರೆ. ರೈತರ ಸಮಸ್ಯೆಗಳು, ತಾಪತ್ರಯಗಳು, ಒಂದರ ಹಿಂದೊಂದರಂತೆ ಎದುರಾಗುವ ತೊಂದರೆಗಳು, ಕೈಗೆ ಹತ್ತದ ಬೆಳೆ, ಏರುವ ಬಡ್ಡಿ, ತೀರಿಸಲಾಗದ ಸಾಲ ಎಲ್ಲವೂ ಸೇರಿಕೊಂಡು ರೈತನನ್ನು ಅಕ್ಷರಶಃ ಕಂಗಾಲು ಮಾಡಿಬಿಟ್ಟಿದೆ. ರೈತನಾಗಿ ಹುಟ್ಟುವುದು ಮತ್ತು ರೈತನಾಗಿಯೇ ಬದುಕುವುದು ಒಂದು ದೌರ್ಭಾಗ್ಯ ಎಂದು ರೈತರೇ ಅಂದುಕೊಳ್ಳುವ ಮಟ್ಟಕ್ಕೆ ಅವರನ್ನು ದೇಶ ತಂದಿಟ್ಟಿದೆ.
ಸ್ಮಾರ್ಟ್‌ಸಿಟಿಗಳನ್ನು ಕಟ್ಟಲು ಹೊರಡುವವರು, ವಿದೇಶಗಳ ಮಾದರಿಯನ್ನು ತಂದು ಮುಂದಿಡುವವರು, ಅನ್ನಭಾಗ್ಯ ಮುಂತಾದ ಯೋಜನೆಗಳನ್ನು ಘೋಷಿಸುವವರು ಇಲ್ಲಿ ಬೇಕಾದಷ್ಟು ಮಂದಿ ಸಿಗುತ್ತಾರೆ. ನಮ್ಮ ಬಹುತೇಕ ರಾಜಕೀಯ ನಾಯಕರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ ಅನ್ನುವುದನ್ನು ಅವರು ಆರಂಭಿಸುವ ಯೋಜನೆಗಳೇ ಹೇಳುತ್ತವೆ.

ಕತ್ರಿಗುಪ್ಪೆಯಲ್ಲಿ ಒಬ್ಬ ಇಪ್ಪತ್ತು ವರುಷದ ತರುಣ ತನ್ನ ಬೆನ್ನಿಗೆ ಬಹುರಾಷ್ಟ್ರೀಯ ಕಂಪೆನಿಯೊಂದರ ಹೆಸರಿರುವ ಹಲಗೆಯನ್ನು ಕಟ್ಟಿಕೊಂಡು ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ. ಅದೇ ಸಂಸ್ಥೆಯವರು ಕೊಟ್ಟ ಟೀಶರ್ಟು, ಪ್ಯಾಂಟು, ಸಾಕಷ್ಟು ದುಬಾರಿಯಾದ ಶೂ ಹಾಕಿಕೊಂಡಿದ್ದ ಆ ಹುಡುಗನನ್ನು ಮಾತಾಡಿಸಿದರೆ, ಅವನು ನಾಗಮಂಗಲದ ರೈತನ ಮಗ ಅನ್ನುವುದು ಗೊತ್ತಾಯಿತು. ಆರೇಳು ಎಕರೆ ಜಮೀನಿದ್ದ ಕಾಲದಲ್ಲಿ ತಿರುಗನಹಳ್ಳಿ ಸಣ್ಣಕ್ಕಿಯನ್ನು ಅವನ ತಾತಂದಿರ ಕಾಲದಲ್ಲಿ ಬೆಳೆಯುತ್ತಿದ್ದರಂತೆ. ಆಮೇಲೆ ರಾಗಿ, ಹುರುಳಿ ಬೆಳೆಯಲು ಶುರುಮಾಡಿದರಂತೆ. ಇವನ ಕಾಲಕ್ಕೆ ಆಸ್ತಿ ಪಾಲಾಗಿ ಒಂದೆಕರೆ ಹದಿನೆಂಟು ಗುಂಟೆ ಇವನ ಪಾಲಿಗೆ ಬಂದಿತ್ತಂತೆ.

ಅಷ್ಟು ನೆಲದಲ್ಲಿ ಏನಾದರೂ ಬೆಳೆಯೋದಕ್ಕಾಗಲ್ಲವಾ? ತರಕಾರಿ ಬೆಳೆಯಬಹುದಲ್ಲ ಅಂತ ಕೇಳಿದರೆ ಅವನು ಅದು ಮರಳುಮಿಶ್ರಿತ ಮಣ್ಣಿರುವ ನೆಲ. ಮಳೆ ಬಿದ್ದರೆ ಮಾತ್ರ ನೀರು. ಬಾವಿ ತೋಡಿಸಿದರೆ ನೀರು ಸಿಗುತ್ತೆ ಅಂತ ಖಾತ್ರಿಯಿಲ್ಲ ಅಂತೆಲ್ಲ ಕತೆ ಹೇಳತೊಡಗಿದ. ಒಟ್ಟಿನಲ್ಲಿ ಆತನಿಗೆ ಊರಲ್ಲಿರಲು ಇಷ್ಟವಿಲ್ಲ, ನಗರಕ್ಕೆ ಬಂದು ಸೇರಬೇಕು ಅನ್ನುವುದು ಅವನ ಮಾತಿನಲ್ಲೇ ಮತ್ತೆ ಮತ್ತೆ ವ್ಯಕ್ತವಾಗುತ್ತಿತ್ತು. ಹೀಗೊಂದು ಬೋರ್ಡು ಬೆನ್ನಿಗೆ ಕಟ್ಟಿಕೊಂಡು ರಸ್ತೆಯಲ್ಲಿ ಅಲೆಯೋದು ಆತ್ಮಗೌರವದ ಕೆಲಸ ಹೌದಾ ಅಲ್ಲವಾ ಅನ್ನುವ ಬಗ್ಗೆ ಗೊಂದಲಗಳಿದ್ದವು. ಬೆಂಗಳೂರಲ್ಲಿ ಕೆಲಸ ಅಂತ ಹೇಳಿಕೊಳ್ಳುವುದು ನಾಗಮಂಗಲದ ರೈತ ಎಂದು ಹೇಳಿಕೊಳ್ಳುವುದಕ್ಕಿಂತ ಗೌರವದ್ದು ಎಂದು ಅವನ ಪರಿಸರ ಅವನಿಗೆ ಕಲಿಸಿಕೊಟ್ಟಿತ್ತೇನೋ?

ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ? ನಮ್ಮ ದೇಶದಲ್ಲಿ ಸಹಕಾರಿ ಚಳವಳಿಗಳು ಸತ್ತೇ ಹೋದಂತಿವೆ. ಒಂದು ಕಾಲದಲ್ಲಿ ರೈತರ ಸಹಕಾರಿ ಸಂಘಗಳು, ಸಂಸ್ಥೆಗಳು ರೈತನ ಬೆನ್ನಿಗೆ ನಿಲ್ಲುತ್ತಿದ್ದವು. ಬೆಳೆಗಾರರ ಸಹಕಾರಿ ಸಂಘಗಳು ರೈತನ ಹಿತರಕ್ಷಣೆ ಮಾಡುತ್ತಿದ್ದವು. ಅಕ್ಕಿ ಮಿಲ್ಲುಗಳು ಕೂಡ ರೈತನಿಗೆ ಆಪತ್ಕಾಲಕ್ಕೆ ನೆರವಾಗುತ್ತಿದ್ದವು. ಇವತ್ತು ಅಂಥ ಯಾವ ವ್ಯವಸ್ಥೆಯೂ ರೈತನ ಹಿತ ಕಾಯುತ್ತಿಲ್ಲ. ಅದಕ್ಕೆ ಕಾರಣ ರೈತನೂ ಅಲ್ಲ, ಸಹಕಾರಿ ಸಂಘಗಳೂ ಅಲ್ಲ. ಮಹಾನಗರದಲ್ಲಿ ತಲೆಯೆತ್ತಿರುವ ಶಾಪಿಂಗ್‌ ಮಾಲ್‌ಗ‌ಳು. ಅವುಗಳ ಕಾರ್ಯವಿಧಾನ, ಅವುಗಳ ನಡುವಿನ ಪೈಪೋಟಿ. ರೈತನಿಗೆ ತನ್ನ ಉತ್ಪನ್ನವನ್ನು ಎಲ್ಲಿಗೆ ತಲುಪಿಸಬೇಕು ಅನ್ನುವುದೇ ಗೊತ್ತಾಗದ ಸ್ಥಿತಿ.

ಕರ್ನಾಟಕ ಹಾಲು ಮಹಾಮಂಡಲದ ಕಾರ್ಯವೈಖರಿಯನ್ನೇ ನೋಡಿ. ಅದು ಎಷ್ಟು ಅಚ್ಚುಕಟ್ಟಾಗಿ, ಸಮಾನತೆ ಮತ್ತು ಸಹಕಾರ ತತ್ವವನ್ನು ಪಡಿಮೂಡಿಸಿಕೊಂಡು ನಡೆಯುತ್ತಿದೆ. ಅಲ್ಲೇನಾದ್ರೂ ತೊಂದರೆಗಳಾದರೆ, ಅದು ಅಧಿಕಾರ ಹಿಡಿದವರ ದುರಾಸೆಯಿಂದಲೋ ಅಧಿಕಾರ ಲಾಲಸೆಯಿಂದಲೋ ಆಗಬೇಕೇ ಹೊರತು, ರೈತರಿಂದಲೋ ವ್ಯವಸ್ಥೆಯ ಲೋಪದಿಂದಲೋ ಅಲ್ಲ. ಅಂಥದ್ದೇ ಒಂದು ವ್ಯವಸ್ಥೆಯನ್ನು ಅಕ್ಕಿ, ಬೇಳೆ, ತರಕಾರಿ, ಟೊಮ್ಯಾಟೋ- ಇವುಗಳಿಗೂ ಕಲ್ಪಿಸುವುದು ಕಷ್ಟವೇ? ಒಂದು ದಿನ ಇಟ್ಟರೆ ಹಾಳಾಗಿ ಹೋಗುವಂಥ ಹಾಲನ್ನೇ ಶೇಖರಿಸಿ, ಸರಬರಾಜು ಮಾಡುವುದು ಸಾಧ್ಯವಾಗಿರುವಾಗ ಅಂಥದ್ದೇ ಒಂದು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಬೇರೆ ಬೆಳೆಗಾರರಿಗೂ ಯಾಕೆ ಕಲ್ಪಿಸಿಕೊಡಬಾರದು. ಒಂದು ಅಕ್ಕಿ ಮಹಾಮಂಡಲ, ಬೇಳೆ ಮಹಾಮಂಡಲ, ತರಕಾರಿ ಮಹಾಮಂಡಲ ಆರಂಭವಾಗಿ, ಲಾಭದಾಸೆಯಿಲ್ಲದೇ, ನಷ್ಟವೂ ಆಗದಂತೆ ಅದು ರೈತರಿಂದ ಗ್ರಾಹಕರಿಗೆ ಅಕ್ಕಿ, ಬೇಳೆ, ತರಕಾರಿಗಳನ್ನು ಹಸ್ತಾಂತರ ಮಾಡುವ ಕೆಲಸ ಮಾಡಬಾರದು. ನೀಟಾಗಿ ಪ್ಯಾಕ್‌ ಆಗಿರುವ ವೈವಿಧ್ಯಮಯ ತರಕಾರಿಗಳು ಬೆಳಗ್ಗೆ ಮನೆಗೇ ಬಂದು ಬೀಳುತ್ತವೆ ಅಂದರೆ ಯಾರು ತಾನೇ ಬೇಡ ಅನ್ನುತ್ತಾರೆ.

ರೈತರಿಗೆ ಇರುವ ಶಕ್ತಿಯೇ ಅದು. ಗೆಳೆಯರೊಬ್ಬರು ಹೇಳುವಂತೆ ನಮ್ಮ ದೇಶದಲ್ಲಿ ಶೇಕಡಾ 90ರಷ್ಟು ರೈತರಿದ್ದಾರೆ. ಅವರೆಲ್ಲ ಸೇರಿ ಒಂದು ರೈತರ ಪಕ್ಷ ಕಟ್ಟಿದರೆ, ರೈತರೆಲ್ಲ ಜಾತಿ ಮತಗಳ ಬೇಧವಿಲ್ಲದೇ, ನಾವು ರೈತರ ಜಾತಿ ಅಂದುಕೊಂಡು ಮತಹಾಕಿದರೆ, ಇಲ್ಲಿ ರೈತನೊಬ್ಬ ಪ್ರಧಾನ ಮಂತ್ರಿಯೂ ಮುಖ್ಯಮಂತ್ರಿಯೂ ಆಗಬಲ್ಲ. ಇಡೀ ಕ್ಯಾಬಿನೆಟ್ಟಿಗೆ ಕ್ಯಾಬಿನೆಟ್ಟೇ ರೈತರು ತುಂಬಿಕೊಂಡರೆ ನಮ್ಮ ದೇಶದಲ್ಲೊಂದು ಬಹುದೊಡ್ಡ ಕ್ರಾಂತಿಯೇ ಆಗಿಬಿಡಬಹುದು. ಈ ಪ್ರಚಾರದ ರಾಜಕಾರಣ, ಭಾಗ್ಯದ ರಾಜಕಾರಣಗಳನ್ನೆಲ್ಲ ಮೂಲೆಗೆ ತಳ್ಳಿ ಶ್ರಮಸಂಸ್ಕೃತಿಯ ಗೆಲುವು ಕಣ್ಣಿಗೆ ಕಟ್ಟಬಹುದು.

ಕಳೆದೊಂದೆರಡು ತಿಂಗಳ ಹಿಂದೆ ಸರ್ಕಾರಿ ಬಸ್ಸಿನಡಿಗೆ ಸಿಕ್ಕಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷವೋ ಐದು ಲಕ್ಷವೋ ಪರಿಹಾರ ಘೋಷಿಸಿತು. ಆ ಊರಿನ ರೈತರೊಬ್ಬರು ಅದನ್ನು ನೋಡಿ ಹೇಳಿದ್ದಿಷ್ಟು: ಆ ಹುಡುಗ ಹೆಲ್ಮೆಟ್‌ ಹಾಕಿರಲಿಲ್ಲ.
ಅವನಿಗೆ ಲೈಸೆನ್ಸ್‌ ಇರಲಿಲ್ಲ. ಕಂಠ ಪೂರ್ತಿ ಕುಡಿದಿದ್ದ. ಅಡ್ಡಾದಿಡ್ಡಿಯಾಗಿ ವಾಹನ ಓಡಿಸುತ್ತಿದ್ದ. ಅಷ್ಟೆಲ್ಲ ತಪ್ಪುಗಳನ್ನು ಮಾಡಿ ಬಸ್ಸಿನಡಿಗೆ ಬಿದ್ದು ಸತ್ತ. ಅದರಲ್ಲಿ ಡ್ರೈವರನ ಯಾವ ತಪ್ಪೂ ಇರಲಿಲ್ಲ. ಜನರೆಲ್ಲ ಸೇರಿ ಡ್ರೈವರನಿಗೆ ಹೊಡೆದರು. ಆ ಹುಡುಗನ ಕುಟುಂಬಕ್ಕೆ ಪರಿಹಾರ ಕೊಡಿಸಿದರು. ಮೂವತ್ತು ವರುಷಗಳ ಕಾಲ ಒಂದೇ ಒಂದು ಅಪಘಾತ ಮಾಡದೇ, ಒಂದೇ ಒಂದು ಸಲ ಕಾನೂನು ಭಂಗ ಮಾಡದೇ, ಕೊಟ್ಟ ಸಂಬಳ ತೆಗೆದುಕೊಂಡು, ರಗಳೆ ಮಾಡದೇ, ನಿಯತ್ತಿನಿಂದ ಕೆಲಸ ಮಾಡಿದವನಿಗೆ ಸಿಕ್ಕಿದ್ದು ಧರ್ಮದೇಟು ಮತ್ತು ಶಿಕ್ಷೆ. ಎಲ್ಲಾ ತಪ್ಪುಗಳನ್ನು ಮಾಡಿದವನಿಗೆ ದೊಡ್ಡ ಮೊತ್ತದ ಪರಿಹಾರ. ಇದು ನಮ್ಮ ದೇಶದ ರಾಜಕೀಯ ಸ್ಥಿತಿ ಮತ್ತು ಗತಿ.
ಇವತ್ತು ಗ್ರಾಮೀಣ ಭಾರತವನ್ನು ಕೀಳರಿಮೆಗೆ ತಳ್ಳುತ್ತಿರುವುದು ನಮ್ಮ ಮನರಂಜನಾ ಉದ್ಯಮ. ಅದು ಎಲ್ಲಾ ಬದಲಾವಣೆಗಳ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಬಟ್ಟೆ, ಮಾತಿನ ಶೈಲಿ, ಕೆಲಸ ಮಾಡುವ ಕ್ರಮ, ನಿಲುವು, ಒಲವು, ದೃಷ್ಟಿಕೋನ ಎಲ್ಲವನ್ನೂ ಎಂಟರ್‌ಟೇನ್‌ಮೆಂಟ್‌ ಹೆಸರಿನಲ್ಲಿ ಬದಲಾಯಿಸಲಾಗುತ್ತಿದೆ. ಅದರಲ್ಲಿ ಜಾಹೀರಾತುಗಳ ಪಾತ್ರವೂ ಉಂಟು. ಬಟ್ಟೆ ಬಿಳುಪಾಗಿರಬೇಕು, ಮುಖ ಬಿಳುಪಾಗಿರಬೇಕು, ಟಾಯ್ಲೆಟ್ಟು ಅಡುಗೆ ಮನೆಯಂತಿರಬೇಕು, ಮನೆ ಅರಮನೆಯಂತೆ ಇರಬೇಕು ಎಂಬಿತ್ಯಾದಿ ಸಂಗತಿಗಳನ್ನು ಎಷ್ಟು ಸೊಗಸಾಗಿ ಹೇರಲಾಗುತ್ತಿದೆ ಎಂದರೆ ಹಳ್ಳಿಯ ಹುಡುಗ ಹುಡುಗಿಯರು ಕೂಡ ಬಟ್ಟೆಗಳಲ್ಲಿ ಆಧುನಿಕರಾಗುತ್ತಿದ್ದಾರೆ. ಇವತ್ತು ಕೆಲಸ ಇದೆಯೋ ಇಲ್ಲವೋ ಆದಾಯ ಇದೆಯೋ ಇಲ್ಲವೋ ಚೆಂದದ ಬಟ್ಟೆ ಮತ್ತು ಟಚ್‌ಸ್ಕ್ರೀನ್‌ ಮೊಬೈಲು ಅನಿವಾರ್ಯ ಎಂಬ ನಂಬಿಕೆ ಬಂದುಬಿಟ್ಟಿದೆ.

ಶಿಕ್ಷಣ ನಮ್ಮೆಲ್ಲರನ್ನೂ ಹೆಚ್ಚು ಹೆಚ್ಚು ಬುದ್ಧಿವಂತರನ್ನಾಗಿ ಮಾಡಬೇಕಾಗಿತ್ತು. ಆದರೆ ಶಿಕ್ಷಣವೇ ಅತ್ಯಂತ ದಡ್ಡತನದ ಕೆಲಸ ಆದಂತಿದೆ. ವಿದ್ಯೆ ಎಂದರೆ ಮಗು ಮತ್ತು ಒಂದು ಲಕ್ಷ ರೂಪಾಯಿಯನ್ನು ಒಂದು ಕಟ್ಟಡದೊಳಗೆ ಎಸೆಯುವುದು ಎಂದಷ್ಟೇ ಆಗಿಬಿಟ್ಟಿದೆ.

ಇದೆಲ್ಲವನ್ನೂ ಹೇಳಬಾರದು. ಆದರೆ ಹೇಳದೇ ವಿಧಿಯಿಲ್ಲ. ಇದು ಬದಲಾಗುತ್ತದೆ ಅಂತೇನೂ ಖಾತ್ರಿಯಿಲ್ಲ. ಒಂದು ಮನೆಯಿದ್ದರೂ ಮತ್ತೊಂದು ಮನೆ, ಒಂದು ಸೈಟಿದ್ದರೂ ಮತ್ತೊಂದು ಸೈಟು, ಒಂದಿದ್ದರೂ ಮತ್ತೊಂದು ಕೊಂಡುಕೊಂಡು ಸುಭದ್ರರಾಗುವ ಭಾವನೆಯಲ್ಲೇ ನಮ್ಮ ದುರಂತದ ಬೀಜ ಇದ್ದಂತಿದೆ.

#ನಕಲು

19/04/2020

ನಮ್ಮ ಹಳ್ಳಿಯಲ್ಲಿ ಒಬ್ಬ ರೈತರು ಶುಂಠಿ ಬಿತ್ತನೆ ಮಾಡಲು ತಯಾರು ಮಾಡುತ್ತಿದ್ದರು. ಕೈಯಲ್ಲಿ bavistin ಪೌಡರ್ ಇತ್ತು. ಅವರ ವಯಸ್ಸು ಸರಿ ಸುಮಾರು 30-32.. ನಂಗೆ ಸ್ವಲ್ಪ ಗಾಬರಿಯಾಯಿತು (bavistin ಒಂದು ಭಯಾನಕ ವಿಷ), ನೋಡಣ ಅಂತ ಅವರ ಹತ್ತಿರ ಹೋದೆ. ನಿಮ್ಮ ಮುಂದೆ ಸ್ವಲ್ಪ ವಿಷಯವನ್ನು ಚರ್ಚಿಸಿಸಲು ಇಚ್ಚಿಸುತ್ತೆನೆ, ನಿಮಗಿಷ್ಟ ಇದ್ರೆ ಅಂದೆ. ಅದ್ರಲ್ಲೇನಿದೆ ಖಂಡಿತ ಸರ್ ಅಂದ್ರು..

ನಮ್ ಚರ್ಚೆ ಶುರುವಾಯಿತು. ನನ್ನ ಹಲವು ಪ್ರೆಶ್ನೆಗಳಿಗೆ ಈ ಕೆಳಕಂಡ ವಿಚಾರಗಳನ್ನು ಅವರು ಬಿಚ್ಚಿಟ್ಟರು.

1. ಶುಂಠಿ ಬೀಜವನ್ನು ಪಕ್ಕದ ಹಳ್ಳಿಯ ರೈತನಿಂದ ತರಲಾಗಿದೆ.
2. ಅದನ್ನು ನಾವು bavistin ಎಂಬ ಶಲಿಂದ್ರ ನಾಶಕದಿಂದ ಉಪಚರಿಸಿ, ಒಂದು ದಿನ ನೆರಳಿನಲ್ಲಿ ಹಾರಿಸುತ್ತೆನೆ
3. ಭೂಮಿಗೆ SSP ಹಾಗು urea, 3 ಟ್ರ್ಯಾಕ್ಟರ್ ತಿಪ್ಪ ಗೊಬ್ಬರ ಮೊದಲ ಹಂತದಲ್ಲಿ ಹಾಕುತ್ತೇನೆ. (ಜಿಕೆವಿಕೆ, kvk ಈ ಜನರಿಂದ ತಿಳೀತು).
4.ಏರು ಮಾಡಿ 3.5 ಅಡಿ ಅಗಲ, ಅರ್ಧ ಅಡಿಯಷ್ಟು ಏರಿಸುವುದು.
5. ಒಂದು ಮಡಿಯಲ್ಲಿ ಮೂರು ಸಾಲುಗಳು. 0.5 ಅಡಿಗೆ, ಮೂರು ಕಣ್ಣು ಹೊಡೆದ ಗಡ್ಡೆಯನ್ನು ಊರುತ್ತ ಹೋಗುವುದು
6. ಒಂದು ಎಕರೆಗೆ 800 ಕೆಜಿ ಬೀಜ ಬೇಕಾಗುತ್ತೆ
7. ಬಿತ್ತುವ ದಿನ ಒಂದು ಎಕರೆಗೆ 8 ಗಂಡು ಆಳು ಬೇಕು..

ನನಗೆ ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮೇಲೆ ಸ್ವಲ್ಪ ಸಲಹೆ ನೀಡಬೇಕು ಅನ್ನಿಸ್ತು. ಈ ಕೆಳಕಂಡ ವಿಷಯಗಳನ್ನು ಅವರಿಗೆ ಅರ್ಥವಗುವ ಹಾಗೆ ಹೇಳಲು ಪ್ರಯತ್ನಿಸಿದೆ.

1. ಮೊದಲು ನೀವು ಆಯ್ಕೆ ಮಾಡಿದ ಬೀಜ ತಪ್ಪು. ಆದಷ್ಟು ಸಹಜ/ಸಾವಯವ ರೈತರಿಂದ ತರಬೇಕು, ಏಕೆಂದರೆ ಅವರ ಬಳಿ ಗೆಡ್ಡೆ ಚನ್ನಗಿರುತ್ತದೆ. ರೋಗದ ಗೆಡ್ಡೆ ಬಹಳ ಕಮ್ಮಿ. ನೋಡಿ ನೀವು ತಂದಿರುವ ಗೆಡ್ಡೆ ಅರ್ಧ ಹಾಳಾಗಿದೆ, ಇದನ್ನು ಪರೀಕ್ಷಿಸಬೇಕು.

ಒಂದು ಬಕೆಟ್ ತಗೆದುಕೊಳ್ಳಿ, ಅದಕ್ಕೆ ಸಗಣಿ, ನೀರು, ಗಂಜಲ, ಸ್ವಲ್ಪ ಅಂದರೆ 50 gm ನಷ್ಟು ಕಲ್ಲು ಸುಣ್ಣ ಹಾಕಿ ಚನ್ನಾಗಿ ತಿರಿಗಿಸಿ. ಇದನ್ನು ಹತ್ತು ನಿಮಿಷ ಬಿಡಿ. ನಂತರ ಶುಂಠಿ ಗಡ್ದೆಗಳನ್ನು ಇದರೊಳಗೆ ಹಾಕಿ. ಚನ್ನಾಗಿ ತಿರುವಿ. ಹತ್ತು ನಿಮಿಷ ಬಿಡಿ. ಬೆಂಡು, ಕೊಳೆತ, ಒಣ ಗಡ್ಡೆಗಳು ತೆಲುತ್ತದೆ. ಇವುಗಳನ್ನು ಹೊರಹಾಕಿ (ಶಕ್ತಿ ಕಮ್ಮಿ ಇರುವ ಗಡ್ಡೆಗಳಿಂದ ಶಕ್ತಿ ಕಮ್ಮಿಇರುವ ಗಿಡಗಳೇ ಬರೋದು, ಇವು ರೋಗಕ್ಕೆ ತುತ್ತಾಗಿ ತಾವು ಹಾಳಾಗದೆ, ಪಕ್ಕಲ್ಲಿ ಇರೋ ಚನ್ನಾಗಿ ಬೆಳೆದ ಗಿಡಕ್ಕೂ ಬಾಧಿಸುತ್ತದೆ) . ಕೆಳಗೆ ಮುಳುಗಿರುವ ಭಾರದ, ಶಕ್ತಿ ತುಂಬಿರುವ ಗಡ್ಡೆಗಳನ್ನು ತಗೆದು ನೆರಳಲ್ಲಿ 45 ನಿಮಿಷ ಒಣಹಾಕಿ. ನೀರೆಲ್ಲಾ ಸೊರಲಿ.

ಗಂಜಲ, ಸಗಣಿಯಲ್ಲಿ (ದೇಸಿ ಏಮ್ಮೆ, ಹಸು, ಮೇಕೆ) ಅಧಿಕ ಸೂಕ್ಶ್ಮ ಜೀವಿ ಇರುತ್ತದೆ. ಇದನ್ನು ಗಡ್ಡೆ ಜೊತೆ ಸ್ವಲ್ಪ ಸಮಯ ಇಟ್ಟರೆ, ಅಸಂಕ್ಯಾತ ಒಳ್ಳೆ ಜೀವಿಗಳು (useful microbes) ಗಡ್ಡೆ ರೋಗಕ್ಕೆ ಕಾರಣವಾದ ಜೀವಿಗಳ (pathogen)ಜೊತೆಗೆ ಹೋರಾಡಿ, ಆ ಜಾಗದಲ್ಲಿ ಇವು ಮನೆಮಾಡಿಕೊಳ್ಳುತ್ತದೆ. ಇದು ಬಹಳ ಮುಖ್ಯವಾದ ಸಂಗತಿ..

ಕೆಮಿಕಲ್ ಗಳು ಗಡ್ಡೆಯಲ್ಲಿರುವ ರೋಗ ಕಾರುವ ಜೀವಿಯನ್ನು ಕೊಲ್ಲುತ್ತದೆ, ಆದರೆ ಆ ಜಾಗ ಕಾಲಿ ಬಿಡುತ್ತದೆ. ಕಾಲಿ ಇದ್ದ ಜಾಗದಲ್ಲಿ, ಕೆಮಿಕಲ್ ಅಂಶ ಕ್ರಮೇಣ ಕಮ್ಮಿಯಾದಂತೆ ಮತ್ತೆ ರೋಗ ಕಾರುವ ಜೀವಿಗಳು ಮನೆಮಾಡುತ್ತದೆ. ಮತ್ತೆ ಮತ್ತೆ ಕೆಮಿಕಲ್ ಬೇಡುತ್ತದೆ. ಇದು ಪ್ರಕೃತಿಗೂ ಹಾನಿ, ಗಿಡಕ್ಕೂ ಹಿಂಸೆ, ರೈತನಿಗೂ ಖರ್ಚು. ಇದು ಬಹಳ ಸೂಕ್ಷ್ಮ ದ ವಿಷಯ.

2. ಸ್ವಲ್ಪ ತೇವದ ಗಡ್ಡೆಗಳನ್ನು ಒಂದು ಗೋಣಿ ಚಿಲಕ್ಕೆ ತುಂಬಿ. ಈ ಚೀಲವನ್ನು ಒಂದು ದೊಡ್ಡ ಪ್ಲಾಸ್ಟಿಕ್ ಚೀಲದೊಳಗೆ ಮತ್ತೆ ಹಾಕಿ..

3. ಈ ಚೀಲವನ್ನು, ಚನ್ನಾಗಿ ಕೊಳೆತ ಗೊಬ್ಬರದ ಒಳಗೆ ಅವಿತಿಡಿ. ಹೀಗೆ ಮಾಡಿದರೆ ಗೊಬ್ಬರದ ಬಿಸಿಗೆ ಗಡ್ಡೆಯ ಕಣ್ಣುಗಳು ಚನ್ನಾಗಿ ಹಾಗು ವೇಗವಾಗಿ ಹೊಡೆಯುತ್ತಾದೆ. ಕೊಳೆತ ಗೊಬ್ಬರ ಸಿಗದಿದ್ದರೆ, ಒಂದು ಕತ್ತಲು
ಕೋಣೆಯಲ್ಲಿಡಿ (ನೆನಪಿಡಿ: ಅರ್ಧ ಕೊಳೆತ ಗೊಬ್ಬರದೋಳಗಲ್ಲ) ನಾಲ್ಕೈದು ದಿನದ ನಂತರ ಕಣ್ಣುಗಳು ಚನ್ನಾಗಿ ಒಡೆಯಲಾರಂಬಿಸುತ್ತದೆ.

4. ನಂತರ ಮಣ್ಣನ್ನು ಏರಿಸಿ..2.5 ಅಡಿ ಅಗಲ, ಅರ್ಧ ಅಡಿ ಎತ್ತರ.

5. ಒಂದು ಅಡಿ ಅಂತರದಲ್ಲಿ zig zag ಆಕಾರದಲ್ಲಿ ನೆಡಿ.

ಇನ್ನು ಚನ್ನಾಗಿ ಬೆಳಿಯಬೇಕಿದ್ರೆ, ಗಡ್ಡೆಗಳನ್ನು ಮೊದಲು ಕ್ರೇಟ್ ಗಳಲ್ಲಿ ಅಥವಾ ನರ್ಸರಿ ಬ್ಯಾಗ್ ಗಳಲ್ಲಿ ಬೆಳೆದು. 30 ದಿನದ ನಂತರ ಒಳ್ಳೋಳ್ಳೆ ಗಿಡವನ್ನು ಆರಿಸಿ ನೆಡಬೇಕು.

6. ಸಾಧ್ಯವಾದರೆ ಅಂತರ ಬೆಳೆಯಾಗಿ ನಾಟಿ ಚಂಡು ಹೂವು ಬೆಳೀರಿ. ಇದು ಮುಂದೆ ಗೆಡ್ಡೆಗಳಿಗೆ nematodes ಹಾವಳಿಹಿಂದ ರಕ್ಷಿಸುತ್ತದೆ, ಇದೊಂದು ರೋಗ ಕಾರುವ ಸೂಕ್ಷ್ಮ ಜೀವಿ..

7. ಗಡಿಭಾಗದಲ್ಲಿ ನುಗ್ಗೆ ಬೆಳದರೆ ಒಳ್ಳೇದು. ಅದು ಸೂರ್ಯನ ಶಾಖದಿಂದ ಗಿಡವನ್ನು ಕಾಪಾಡುತ್ತದೆ.

8. Trichoderma, psedomonas ಪ್ರತಿ 30 ದಿನಕ್ಕೊಮ್ಮೆ ಸಿಂಪಡಿಸಿದರೆ ಒಳ್ಳೇದು.

(ನಾಟಿ ಮಾಡಿದ ತದನಂತರ ವಿಷಯವನ್ನು ಚರ್ಚಿಸಿದೆವು, ನಾನಿಲ್ಲಿ ನಾಟಿಯ ವಿಧಾನವನ್ನು ಅಷ್ಟೇ ನಿಮ್ಮ ಮುಂದೆ ಇಟ್ಟಿದ್ದೆನೆ)

ಎಲ್ಲಾ ವಿಷಯಗಳನ್ನು ಚರ್ಚಿಸಿದ ನಂತರ ಆ ರೈತ ಸ್ವಲ್ಪ ನನ್ನ ಟ್ರ್ಯಾಕ್ ಗೇ ಬಂದ. ಅರ್ಥ ಮಾಡಿಕೊಂಡ. ನಾಳೆ ಹೀಗೆ ಮಾಡ್ತೀನಿ ಸರ್. ತುಂಬಾ ಥ್ಯಾಂಕ್ಸ್ ಅಂದ. ನಂಗು ಖುಷಿ ಆಯ್ತ್. ಅವ್ರ್ ಮನೇಲೆ ರಾಗಿ ರೊಟ್ಟಿ ಹುರುಳಿ ಕಾಳು ಚಟ್ನಿ.. ಬೆಳಗಿನ ಪ್ರಸಾದ ಮುಗಿತು..

ಮರು ದಿನ, ಕೂಲಿಯಾಳುಗಳು ಬಂದು, ಅಯ್ಯೋ, ಅದೆಲ್ಲ ವರ್ಕ್ ಆಗಲ್ಲ. ಸಾವಯವ, ಸಹಜ ಬೇಸಾಯ ಇವೆಲ್ಲ ನಡಿಯಲ್ಲ, ಅದು ನಮನ್ ತವರಿಗಲ್ಲಾ. ಅದ್ರಲ್ಲಿ ಏನು ಇಳುವರಿ ಸಿಗಲ್ಲ.. ಹಾಗೆ..ಹೀಗೆ.. ಅಂತ ಹೇಳಿ ಅವ್ರ್ ತಲೆ ತಿಂದು ಮತ್ತೆ ಅವರ ಕೆಮಿಕಲ್ ಟ್ರ್ಯಾಕ್ ಗೇ ಕರೆದು ಹೋಗುವ ಪ್ರಯತ್ನ ಮಾಡಿದ್ದಾರೆ. ಅದೃಷ್ಟ, ಆ ರೈತ ಅವರ ಮಾತು ಕೇಳಲಿಲ್ಲ. ಈ ನಮ್ಮ ಪಾರಂಪರಿಕ ವಿದ್ಯಾಗೆ ಶರಣಾಗಿ, ನನ್ನ ಮಾತಿಗೂ ಬೆಲೆ ಕೊಟ್ಟು ಸಹಜ ಬೇಸಯಕ್ಕೆ ಅವರ ಜಮೀನ್ ನಲ್ಲಿ ನಾಂದಿ ಹಾಡಿದರು...

28/07/2019

ರೈತಾಪಿ ಜಗತ್ತು ಕೃಷಿ ಲೋಕದ ಕನಸು, ಕನವರಿಕೆಗಳನ್ನು ಎದೆಯಿಂದ ಎದೆಗೆ ದಾಟಿಸುವ ರಾಯಭಾರಿ. ಕೃಷಿಕರ ಅಭಿಮಾನ, ಸ್ವಾಭಿಮಾನದ ರೂವಾರಿ.
ಇದು ಬರೀ ಕೃಷಿಕರಿಗಷ್ಟೇ ಸಿಮೀತವಾದ ಪತ್ರಿಕೆಯಲ್ಲ. ನೆಲಕ್ಕೆ ಬಿದ್ದ ಬೀಜದಿಂದ ಹಿಡಿದು, ಅದು ಅನ್ನವಾಗಿ ಊಟದೆಲೆ ಅಲಂಕರಿಸುವ ತನಕದ ವಿದ್ಯಮಾನಗಳು ಇಲ್ಲಿ ಮಿಳಿತಗೊಳ್ಳಲಿವೆ.
ಹೀಗಾಗಿ ಇದು ಎಲ್ಲರ ಜಗತ್ತು. ವಿಶೇಷವಾಗಿ ನಿಸರ್ಗವನ್ನು ಪ್ರೀತಿಸುವ, ನಿಸರ್ಗದತ್ತವಾಗಿ ಬದುಕಬೇಕು ಅನ್ನುವವರ ಖಾಸಾ ದುನಿಯಾ. ಚಂದಾದಾರರಾಗಿ ಈ ಜಗತ್ತನ್ನು ನಿಮ್ಮದಾಗಿಸಿಕೊಳ್ಳಿ...

Media/news company

Address

No 58&58/1
Bangalore
560056

Telephone

8884777551

Alerts

Be the first to know and let us send you an email when Krushi Udhyog posts news and promotions. Your email address will not be used for any other purpose, and you can unsubscribe at any time.

Contact The Business

Send a message to Krushi Udhyog:

Share