MR News Tv

MR News Tv follow has we give truth news

22/08/2021
12/11/2020

ಬೆಂಗಳೂರಿನಲ್ಲಿ ಹೊಸಗುಡ್ಡದಹಳ್ಳಿ ಕೆಮಿಕಲ್ ಗೋದಾಮು ಸ್ಪೋಟ ಪ್ರಕರಣ

ರೇಖಾ ಕೆಮಿಕಲ್ಸ್ ಕಾಪೋರೇಷನ್ ವಿರುದ್ದ ಮತ್ತೊಂದು FIR

ಶಂಭುಲಿಂಗ ದೂರು ಆಧಾರಿಸಿ FIR ದಾಖಲು

ರೇಖಾ ಕೆಮಿಕಲ್ಸ್ ಕಂಪನಿ ಕೆಲಸದ ವೇಳೆ ಅಗ್ನಿ ಅವಘಡ ಆಗಿದೆ

IPC ಸೆಕ್ಷನ್ 427, 338,285 ಅಡಿ ಪ್ರಕರಣ ದಾಖಲು

ಅವರ ಎಡವಟ್ಟಿನಿಂದ ನಮ್ಮ ಲಗೇಜ್ ಟೆಂಪೋ, 5 ಕಾರು, 2 ಬೈಕ್ ಅಗ್ನಿ ಗೆ ಅಹುತಿಯಾಗಿದೆ.

ರೇಖಾ ಕೆಮಿಕಲ್ಸ್ ಮಾಲೀಕ ಸಜ್ಜನ್ ರಾಜ್ , ಸಜ್ಜನ್ ರಾಜ್ ಪತ್ನಿ ಕಮಲಾ, ಮಗ ಅನಿಲ್ ಕುಮಾರ್ ನಿನ್ನೆ ಬಂಧಿಸಿದ್ದ ಬ್ಯಾಟರಾಯನಪುರ ಪೊಲೀಸರು

ಇಂದು ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು

1978 ರಲ್ಲಿ ರೇಖಾ ಕೆಮಿಕಲ್ಸ್ ಕಂಪನಿ ಸ್ಥಾಪಿಸಿದ ಸಜ್ಜನ್ ರಾಜ್

12/11/2020

*ಮೂವರ ಬಂಧನವಾಗಿದೆ,*

ಸಜ್ಜನ್ ರಾಜ್, ಕಮಲಾ ಹಾಗೂ ಮತ್ತೋರ್ವನ ಬಂಧನವಾಗಿದೆ

ಇದರಿಂದ ನಾವು ಪಾಠ ಕಲಿಯಬೇಕಿದೆ.

ಎಲ್ಲೆಲ್ಲಿ ಕೆಮಿಕಲ್ ಘಟಕಗಳಿವೆ ಎಂಬ ಪರಿಶೀಲನೆ ಆಗಬೇಕು.

ಠಾಣಾವಾರು ಇಂಥಹ ಸುರಕ್ಷಿತವಲ್ಲದ ಘಟಕಗಳನ್ನ ಪತ್ತೆ ಹಚ್ಚಲು ಸೂಚಿಸಲಾಗಿದೆ.

ಘಟನೆ ನಡೆದ ಒಂದೇ ದಿನದಲ್ಲಿ‌ ಪೊಲೀಸರು ಸಂಬಂಧಪಟ್ಟ ಮೂವರನ್ನ ಬಂಧಿಸಿದ್ದಾರೆ.

ಅನುಮತಿ ನೀಡಿದವರು ಯಾರು? ಅಧಿಕಾರಿಗಳಿಂದ ಎಲ್ಲಿ‌ ಲೋಪವಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇಂಡಸ್ಟ್ರಿಯಲ್ ಕಮ್ ರೆಸಿಡೆನ್ಷಿಯಲ್ ಏರಿಯಾಗಳಲ್ಲಿ ಇಂಥಹ ಘಟಕಗಳಿವೆ.

ಇಂಥಹ ಏರಿಯಾಗಳ ಮೇಲೆ ವಿಶೇಷ ನಿಗಾ ಇರಿಸಲಾಗುವುದು.

ಆ್ಯಸಿಟೋನ್, ಮಿಥೈಲ್ ಕ್ಲೋರೈಡ್ ಹಾಗೂ ಆಲ್ಕೋಹಾಲ್ ಕಂಟೆಂಟ್ ಕೆಮಿಕಲ್ ಇರಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ.

ಕೆಮಿಕಲ್ ಘಟಕದ ಮಾಲೀಕರಿಂದಲೇ ಸುತ್ತಮುತ್ತಲಿನ ನಷ್ಟವಾದ ಮನೆಗಳ ಮಾಲೀಕರಿಗೆ ಪರಿಹಾರ ಕೊಡಿಸಲಾಗುವುದು.

12/11/2020

ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡಿ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ

*ವಿದೇಶಗಳಲ್ಲಿ ವ್ಯಾಸಂಗ ಮಾಡಿ, ಆದರೆ ಭಾರತಕ್ಕೆ ಹಿಂದಿರುಗಿ ಸೇವೆ ಸಲ್ಲಿಸಿ*

*ಮೈಸೂರು, ನವೆಂಬರ್ 11, ಬುಧವಾರ*

ಶೇ.70 ರಷ್ಟು ವೈದ್ಯರು ನಗರಗಳಲ್ಲಿ ನೆಲೆಸಲು ಬಯಸುತ್ತಾರೆ. ಆದರೆ ಶೇ.70 ರಷ್ಟು ಜನರು ಹಳ್ಳಿಗಳಲ್ಲಿ ಜೀವಿಸುತ್ತಿದ್ದು, ಇವರಿಗಾಗಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ ನಂತರ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ವರ್ಷ 2,500 ವೈದ್ಯರು ವ್ಯಾಸಂಗ ಮುಗಿಸಲಿದ್ದಾರೆ. ಮಾನವೀಯತೆ ಹಾಗೂ ಜವಾಬ್ದಾರಿಯಿಂದ ಈ ಅಂಶ ಮನಗಂಡು, ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಬೇಕು” ಎಂದು ಕೋರಿದರು.

“ಕೆಲ ವೈದ್ಯರು ಈ ನಿಯಮ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂತಹವರು ಪ್ರಕರಣ ಹಿಂಪಡೆದು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು. ಹೊರ ದೇಶಗಳ ಸಂಸ್ಥೆಗಳಲ್ಲೂ ವ್ಯಾಸಂಗ ಮಾಡಬಹುದು. ಆದರೆ ಮರಳಿ ಬಂದು ನಮ್ಮ ದೇಶದಲ್ಲೇ ಸೇವೆ ಸಲ್ಲಿಸಬೇಕು” ಎಂದರು.

“ರಾಜ್ಯದಲ್ಲಿ 11-12,000 ಜನರಿಗೆ ಒಬ್ಬ ವೈದ್ಯರಿದ್ದಾರೆ. ಸಾವಿರ ಜನರಿಗೆ ಒಂದು ಹಾಸಿಗೆ ಸೌಲಭ್ಯವಿದೆ. 1 ಸಾವಿರ ಜನರಿಗೆ ಒಬ್ಬ ವೈದ್ಯ ಹಾಗೂ ಒಂದು ಸಾವಿರ ಜನರಿಗೆ 2.7 ಹಾಸಿಗೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 150 ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿದ್ದಾರೆ. ಸ್ನಾತಕೋತ್ತರಕ್ಕೆ ಹೊಸದಾಗಿ 17,000 ಸೀಟುಗಳನ್ನು ಸೇರಿಸಲಾಗಿದೆ. ಇವೆಲ್ಲ ಕ್ರಮಗಳಿಂದ ಆರೋಗ್ಯ ಕ್ಷೇತ್ರ ಬಲವಾಗಿದೆ” ಎಂದು ವಿವರಿಸಿದರು.

“ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಜಾಗತಿಕ ಕೋವಿಡ್ ಮರಣ ಪ್ರಮಾಣ ಶೇ.3.5 ರಿಂದ 3.8 ರಷ್ಟಿದೆ. ದೇಶದಲ್ಲಿ ಶೇ.1.4 ಹಾಗೂ ರಾಜ್ಯದಲ್ಲಿ ಶೇ.1.3 ಇದೆ. ಪಾಸಿಟಿವಿಟಿ ದರವು ಕೆಲ ಜಿಲ್ಲೆಗಳಲ್ಲಿ ಶೇ.19, ಮತ್ತೆ ಕೆಲ ಜಿಲ್ಲೆಗಳಲ್ಲಿ ಶೇ.14 ರಷ್ಟಿತ್ತು. ಈಗ ಪಾಸಿಟಿವಿಟಿ ದರ ಶೇ.2.2 ಗೆ ಇಳಿಕೆಯಾಗಿದೆ” ಎಂದು ತಿಳಿಸಿದರು.

“ಆರೋಗ್ಯ ಕ್ಷೇತ್ರ, ಸಂಶೋಧನೆಯಲ್ಲಿ ಜೆಎಸ್‍ಎಸ್ ವಿಶ್ವವಿದ್ಯಾಲಯ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಜೆಎಸ್‍ಎಸ್ ಸಂಸ್ಥೆಯು ನಳಂದ, ತಕ್ಷಶಿಲಾ ಮಾದರಿಯಲ್ಲಿ ಬೆಳೆಯಲಿದೆ. ಕೋವಿಡ್ ವಿರುದ್ಧ ಇನ್ನೂ ಹೋರಾಟ ನಡೆಯುತ್ತಿದ್ದು, 1,800 ಹಾಸಿಗೆಯ ಆಸ್ಪತ್ರೆ, ನುರಿತ ಸಿಬ್ಬಂದಿಯನ್ನು ನೀಡುವ ಮೂಲಕ ಜೆಎಸ್‍ಎಸ್ ಈ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿದೆ ಎಂದು ಸಚಿವರು ಶ್ಲಾಘಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.

*ಸಚಿವರು ಹೇಳಿದ ಇತರೆ ಅಂಶಗಳು*

*ಗುಣಮಟ್ಟ ಹಾಗೂ ಕಡಿಮೆ ದರದ ಚಿಕಿತ್ಸೆ ನೀಡುವ ಗುರಿ ನಮ್ಮ ಸರ್ಕಾರಕ್ಕಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ರಾಜ್ಯದ 1.5 ಕೋಟಿ ಕುಟುಂಬಗಳಿಗೆ ಪ್ರಯೋಜನ ದೊರೆಯುತ್ತಿದೆ.

*ದೇಶದಲ್ಲಿ ಶೇ.60 ರಷ್ಟು ಜನರು ಆರೋಗ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ. ನಮ್ಮಲ್ಲಿ ಅನೇಕ ಆರೋಗ್ಯ ಸೇವೆ ಉಚಿತವಾಗಿದ್ದರೂ ಗುಣಮಟ್ಟ ಹೊಂದಬೇಕಿದೆ.

*ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭವಾಗಲಿದೆ.

*ಕಾಂಗ್ರೆಸ್‍ಗೆ ತಳಮಟ್ಟ ಗೊತ್ತಿಲ್ಲ*
“ಕಾಂಗ್ರೆಸ್ ನವರಿಗೆ ತಳಮಟ್ಟದ ರಾಜಕಾರಣ ಅರ್ಥವಾಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ನಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹಿಂದೆಯೇ ಹೇಳಿದ್ದೆ. ಅದರಂತೆಯೇ ಆಗಿದೆ” ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
“ಬಿಜೆಪಿ ಪ್ರತಿ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸುತ್ತದೆ. ಆದ್ದರಿಂದ ವಿಧಾನಪರಿಷತ್ ಹಾಗೂ ವಿಧಾನಸಭೆ ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇದರಿಂದ ಪಕ್ಷ ಎಷ್ಟು ಬಲಿಷ್ಠವಾಗಿದೆ ಎಂದು ಗೊತ್ತಾಗಿದೆ” ಎಂದರು.

08/11/2020

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾದ ಶರತ್ ಬಚ್ಚೇಗೌಡರು ಕಾಂಗ್ರೆಸ್ಗೆ ಸೇರ್ಪಡೆ ಆಗುವುದರ ಕುರಿತು ಕಾಂಗ್ರೆಸ್ ಮುಖಂಡರ ಸಭೆ ನಡೆಯಲಾಯಿತು

07/11/2020

ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಮತ್ತೆ ಅಕ್ರಮದ ವಾಸನೆ!

ಜ್ಞಾನಿ  ಡಾ. ಎಂ. ಎಂ. ಸಿಂಗ್  ಸಹವಾಸ ಮಾಡಿದ ಜೋಬಿಡೆನ್ ಅಮೆರಿಕದ ಅಧ್ಯಕ್ಷನಾದ...ಅಜ್ಞಾನಿಯ ಸಹವಾಸ ಮಾಡಿದ ಟ್ರಂಪ್ ಸೋತು ಸುಣ್ಣವಾದ...! ಆ ಅಜ್...
06/11/2020

ಜ್ಞಾನಿ ಡಾ. ಎಂ. ಎಂ. ಸಿಂಗ್ ಸಹವಾಸ ಮಾಡಿದ ಜೋಬಿಡೆನ್ ಅಮೆರಿಕದ ಅಧ್ಯಕ್ಷನಾದ...

ಅಜ್ಞಾನಿಯ ಸಹವಾಸ ಮಾಡಿದ ಟ್ರಂಪ್ ಸೋತು ಸುಣ್ಣವಾದ...!

ಆ ಅಜ್ಞಾನಿ ಯಾರು ಅಂತ.... ನಿಮಗೆಲ್ಲಾ ಗೊತ್ತಿರಬೇಕು...!

06/11/2020

ಭಾರತವು ತನ್ನ ವಲಸೆ ಕಾರ್ಮಿಕರನ್ನು ಹಸಿವಿನಿಂದ ಹೇಗೆ ಬಿಟ್ಟಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ - ಬಾಯಾರಿಕೆ, ಮೈಲುಗಟ್ಟಲೆ ಬರಿಗಾಲಿನಲ್ಲಿ ನಡೆಯುವುದು, ರಸ್ತೆಗಳು ಮತ್ತು ಹಳಿಗಳಲ್ಲಿ ಸಾಯುವುದು. ಮೋದಿ ಸರ್ಕಾರದ ಸೂಕ್ಷ್ಮವಲ್ಲದ ಮನೋಭಾವವನ್ನು ಜಗತ್ತು ಕಂಡಿದೆ.

ನಾವು ಅನ್ನು ಮರೆತುಬಿಡುತ್ತೇವೆ ಮತ್ತು ಯಾರನ್ನೂ ಮರೆಯಲು ಬಿಡುವುದಿಲ್ಲ.

04/11/2020

ಅವರಿಗೊಂದು ಸಾಸ್ಟಾಂಗ ನಮಸ್ಕಾರ ಅರ್ಪಿಸ್ತೇನೆ.. ನಮ್ಮದೆಲ್ಲಾ ಸಿಂಗಲ್ ಟೇಕ್ , ಕಟ್ ಪೇಸ್ಟ್ ಎಲ್ಲ ಇಲ್ಲ ಮುನಿರತ್ನಗೆ DKS ಟಾಂಗ್

04/11/2020

OLX ನಲ್ಲಿ ಕಾರು ಮಾರಾಟ ಮಾಡುವುದಾಗಿ ವಂಚಿಸುತ್ತಿದ್ದ ಅಂತರಾಜ್ಯ ವಂಚಕರ ಬಂಧನ

ವಾಜೀಬ್ ಖಾನ್, ಸಾಹೀಲ್, ಶಾಹೀದ್ ಹಾಗೂ ಉಮರ್ ಖಾನ್ ಬಂಧಿತ ಆರೋಪಿಗಳು

ಸಿಸಿಬಿ ಪೊಲೀಸ್ರಿಂದ ಬಂಧನ

ಸೈನಿಕ ಅಧಿಕಾರಿಗಳು ಕಾರು ಮಾರಾಟಕ್ಕಿಟ್ಟಿದ್ದಾರೆ ಎಂದು 0LX ನಲ್ಲಿ ಜಾಹೀರಾತು ನೀಡುತ್ತಿದ್ದ ಆರೋಪಿಗಳು

ಕಾರು ಖರೀದಿಗೆ ಮುಂಗಡವಾಗಿ ಹಣ ಟ್ರಾನ್ಸಫರ್ ಮಾಡಿಸಿಕೊಳ್ಳುತ್ತಿದ್ದರು

ನಂತರ ಕಾರು ಕೊಳ್ಳುವವರಿಗೆ ವಂಚನೆ ಮಾಡುತ್ತಿದ್ದರು

ಹೈದರಾಬಾದ್ ಪೊಲೀಸ್ರಿಂದ ಬಂಧಿತರಾಗಿ ಜೈಲು ಸೇರಿದ್ದ ಆರೋಪಿಗಳು

ಹೈದರಾಬಾದ್ ಜೈಲಿನಿಂದ ಕಸ್ಟಡಿಗೆ ಪಡೆದು ಬಂಧಿಸಿದ ಸಿಸಿಬಿ ಪೊಲೀಸ್ರು

ಆರೋಪಿಗಳ ಬಂಧನದಿಂದ ೨೦ ಪ್ತಕರಣ ಬೆಳಕಿಗೆ

04/11/2020

ಪತ್ರಕರ್ತ ಬಂಧನ, ಬಂಧನ? .

5 ಅಕ್ಟೋಬರ್ 2020: ಮಲಯಾಳಂ ಸುದ್ದಿ ಪೋರ್ಟಲ್‌ನ ಪತ್ರಕರ್ತನನ್ನು ಯುಎಪಿಎ ಅಡಿಯಲ್ಲಿ ಯುಪಿಎ ಪೊಲೀಸರು ಹತ್ರಾಸ್ ಪ್ರಕರಣವನ್ನು ಒಳಗೊಳ್ಳಲು ಹೊರಟಿದ್ದರಿಂದ ಬಂಧಿಸಿದರು

8 ಅಕ್ಟೋಬರ್ 2020: ಬಿಜೆಪಿ ರಾಜಕಾರಣಿಯ ಪತ್ನಿ ಮಾಡಿದ ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕಾರಣ ಮಣಿಪುರದ ಪತ್ರಕರ್ತ ವಾಂಗ್‌ಖೇಮ್ ದೇಶದ್ರೋಹಕ್ಕಾಗಿ ಬಂಧನ

18 ಆಗಸ್ಟ್ 2020: ಸ್ವತಂತ್ರ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಟ್ವೀಟ್ ಮಾಡಿದ ಕಾರಣ ಯುಪಿ ಪೊಲೀಸರು ಬಂಧಿಸಿದ್ದಾರೆ. ನಂತರ ಹೈಕೋರ್ಟ್ ಅವರಿಗೆ ಜಾಮೀನು ನೀಡಿತು

16 ಜುಲೈ 2020: ಜಿಲ್ಲಾ ಅರಣ್ಯ ಅಧಿಕಾರಿಯೊಬ್ಬರ ವಿರುದ್ಧ ಜಾನುವಾರು ಕಳ್ಳಸಾಗಣೆ ತನಿಖೆ ನಡೆಸುತ್ತಿದ್ದ ಕಾರಣ ಅಸ್ಸಾಂ ಪತ್ರಕರ್ತ ರಾಜೀಬ್ ಶರ್ಮಾ ಅವರನ್ನು ಬಂಧಿಸಲಾಯಿತು

11 ಮೇ 2020: ಗುಜರಾತ್ ಪತ್ರಕರ್ತ ಧವಲ್ ಪಟೇಲ್ ಅವರನ್ನು ಸಿಎಂ ಅವರನ್ನು ಟೀಕಿಸಿದ ಕಾರಣ ದೇಶದ್ರೋಹ ಪ್ರಕರಣದಲ್ಲಿ ಪೊಲೀಸರು ಬಂಧಿಸಿದರು.

7 ಮೇ 2020: ಹರಿಯಾಣ ಪತ್ರಕರ್ತ ನರೇಶ್ ಖೋಸ್ಲಾ ಅವರು ತಮ್ಮ ಪ್ರದೇಶದಲ್ಲಿ ಕಲ್ಲು ತೂರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಬಂಧಿಸಲಾಯಿತು

16 ಏಪ್ರಿಲ್ 2020: ಮುಂಬೈನಲ್ಲಿ ವಲಸೆ ಕಾರ್ಮಿಕರ ಬಗ್ಗೆ ನಕಲಿ ಸುದ್ದಿ ಹರಡಿದ ಆರೋಪದ ಮೇಲೆ ಎಬಿಪಿ ಪತ್ರಕರ್ತ ರಾಹುಲ್ ಕುಲಕರ್ಣಿ ಬಂಧನ. ನಾಲ್ಕು ತಿಂಗಳ ನಂತರ ಅವನನ್ನು ಬಿಡಲಾಯಿತು

3 ಸೆಪ್ಟೆಂಬರ್ 2019: ಶಾಲೆಗಳಲ್ಲಿ ಮಧ್ಯಾಹ್ನ meal ಟ ಹಗರಣದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಯುಪಿ ಪತ್ರಕರ್ತನನ್ನು ಬಂಧಿಸಲಾಗಿದೆ. ಅಪರಾಧ? ಶಾಲೆಗಳಲ್ಲಿ ಉಪ್ಪು ಮತ್ತು ರೊಟ್ಟಿ ನೀಡಲಾಗುತ್ತಿದೆ ಎಂದು ವರದಿ ಮಾಡಲಾಗಿದೆ

23 ಸೆಪ್ಟೆಂಬರ್ 2020: ಪ್ರಧಾನಿ ಮೋದಿಯ ಜಾತಿಯ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಜರ್ನಲಿಸ್ಟ್ ಆಕರ್ ಪಟೇಲ್ ಅವರನ್ನು ಗುಜರಾತ್‌ನಲ್ಲಿ ಬಂಧಿಸಲಾಯಿತು

----------------

"ಪ್ರಜಾಪ್ರಭುತ್ವ ಖತ್ರಿ ಮೇ ಹೈ"

4 ನವೆಂಬರ್ 2020: ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಾಬ್ ಗೋಸ್ವಾಮಿ ಬಂಧನಕ್ಕೊಳಗಾದ ಕಾರಣ ಆತನ ಹೆಸರನ್ನು ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಧನ್ಯವಾದ

03/11/2020

ಸಿ ಕೆ ಜಾಫರ್ ಶರೀಫ್ ಜಿ ಅವರ 87 ನೇ ಹುಟ್ಟು ಹಬ್ಬದ ಶುಭಾಶಯಗಳು. ಮಾಜಿ ಕೇಂದ್ರ ರೈಲ್ವೆ ಸಚಿವರು ಭಾರತ ಸರ್ಕಾರ.ಕಾಂಗ್ರೆಸ್ನ ಅತ್ಯುತ್ತಮ ನಾಯಕರಲ್ಲಿ ಒಬ್ಬರು

Address

Bayappanhalli
560036

Telephone

+919901782471

Website

Alerts

Be the first to know and let us send you an email when MR News Tv posts news and promotions. Your email address will not be used for any other purpose, and you can unsubscribe at any time.

Share