12/05/2024
ಅವ್ವಾ!
ಒಂಬತ್ತ ತಿಂಗಳ ನನ್ನ ಹೊತ್ತಾಕಿ,
ಜೀವ ಹೋಗು ಅಷ್ಟ ನೋವ ಆದ್ರೂ ನನ್ನ ಅಳು ಕೇಳಿ ನಕ್ಕಾಕಿ,
ಮಾಡಾಕ ಸಾವಿರ ಕೆಲಸ ಇದ್ದರೂ ‘ ಅವ್ವ ನನ್ನ ಕೂಸ ಏನ ಮಾಡಾಯ್ತಿ ‘ ಅಂತ ಅನಕೋತ ನನ್ನ ಕಾಳಜಿ ಒಳಗ ಇರುವಾಕಿ,
ಸಂತಿಗಿ ಹೋದಾಗ ಎಲ್ಲ ನಂಗ ಬೇಕ ಆದದ್ದ ತಂದ ಕೊಟ್ಟಕಿ,
ನನ್ನ ತಪ್ಪ ಎಲ್ಲ ಮುಚ್ಚಿ ಹಾಕಿ ಅಪ್ಪನ ಕಡೆ ಇಂದ ಬೈಸ್ಕೊಂದಾಕಿ,
ದಿನ ಬೆಳಗ ಆದರ ಹೋಸಾವ ಅರಿವಿ ಹಕ್ಕೋವ ನಾ ಅಂತ ಅತ್ತಾಗ, “ಅಪೂ ಇದ ನೋಡ ಹೊಸಾದ ಐತಿ, ಅದನ ಏನ ಮಾಡ್ತೀ ಬಿಡ ಚೊಲೋ ಇಲ್ಲ” ಅಂತ ಹೇಳಿ ರಮಿಸಿ ದಾಕಿ,
ಸಾಲಿಗೆ ಹಚ್ಚು ಮುಂದ “ ಅಯ್ಯ ! ದಿವಸಗೋಳ ಎಷ್ಟ ಜಲ್ದಿ ಆದು ನೋಡ ಇನ ಅಂಗಳಾಗ ಆಟ ಆಡಕೋತ ಇದ್ದ ಕೂಸ ಎಷ್ಟ ಜಲ್ದಿ ಸಾಲಿಗೆ ಹೋಗು ಅಷ್ಟ ದೊಡದ ಆಯ್ತು “ ಅಂತ ಅಂದಾಕಿ,
ಸಾಲಿ ಒಳಗ ಯಾವುದರ ಆಟ ಒಳಗ ಫಸ್ಟ್ ಬಂದರ ಓಣಿ ಎಲ್ಲ ಕರದ ಕರದ ಹೇಳಕ್ಕಿ,
“ಅಯ್ಯ ! ನೋಡ್ರೆ ಇಲ್ಲಿ ನನ್ನ ಕೂಸ ಹೆಂಗ ಫಸ್ಟ್ ಬಂದೆತಿ ನೋಡ ಇಲ್ಲಿ “ ಅಂತ ಅನ್ನಾಕಿ,
ಅವ್ವಾ! ತಲಿ ನುಸಾದೇತಿ ಅಂದ್ರ “ ಅವ್ವ! ನನ್ನ ಕೂಸಿಗಿ ಯಾವ ಕಣ್ಣ ಹಚ್ಚಿದು ನ ವಾ “ ಅಂತ ಬೈಕೋತ, ನನ್ನ ದಿಟ್ಟಿ ತಗಿಯುವಾಕಿ,
ಓಣಿ ಒಳಗಿನ ಹೆಂಗಸರ ಜೊತಿ “ ಅಯ್ಯ ಬೀಡ ವಾ ! ನನ್ನ ಮಗಾ ಮಿಲ್ಟ್ರಿ ಒಳಗ ಹೊಗಾವ್ ಇದಾ” ಅಂತ ಹೆಳಕ್ಕಿ,
ಒಂದ ದಿನಾ ನು ಬಿಡುವ ಇಲ್ಲದ ಮನಿ ಕೆಲಸ ಮಾಡಿದಾಕಿ,
ನಾಕ ಕತ್ತಿ ವಯಸ್ಸ ಆಗೇತಿ ನಂಗ, ಆದ್ರೂ ಇವತ್ತು ನಿನ್ನ ಹತ್ಯಾಕ ಬಂದ ಯವ್ವ ತೋಡಿ ಮ್ಯಾಗ ಮಕ್ಕೊತೇನಿ ಅಂದ್ರ ಬಾರೋ ನನ್ನಪ್ಪ ಮಕ್ಕೊ ಬಾ ನೀನಕ ಹೆಚ್ಚಿಂದ ಐತಿ ಏನ ಅನ್ನಾಕೀ,
ನಾ ಎಷ್ಟ ಸಿಟ್ಟಿಗಿ ಬಂದರು, ನಕ್ಕೋತ ಯಾಕ ಏನಾಯ್ತು ಅಂತ ಕೆಳಾಕಿ,
ಇಷ್ಟ ದೊಡ್ಡವ ಆದ್ರೂ ಅಲ್ಲಿ ಇಲ್ಲಿ ಹೋಗಬೇಕಾರ ಸಣ್ಣ ಹುಡುಗೊರಿಗಿ ಹೇಳಿದಂಗ ಸಾವಕಾಶ ಹೋಗ ಅನ್ನಾಕಿ,
ಮುಗಿಸಿದ್ರ ಮುಗಿತದ
ಬೇಳೆಸಿದ್ರ ಬೇಳತನಕ ಬೇಳಿತೈತಿ
ನಿನ್ನ ಬಗ್ಗೆ ಹೇಳೋದಕ ಇಲ್ಲ ಅನ್ನೋದ ಏನಿಲ್ಲ, ನಮ್ಮೊಳಗ ಇರತೀ ನಮಗಿಂತ ಹೆಚ್ಚ ದುಡಿತಿ, ನಮ್ಮ ಖುಷಿ ಒಳಗ ನಿನ್ನ ಖುಷಿ ಕಾನತಿ, ನಮ್ಮ ಗೆಲುವ ಒಳಗ ನಿನ್ನ ಗೆಲುವ ಕಾಣತಿ,
ಅವ್ವ, ನಿನಗ ಹ್ಯಾಪಿ ಮದರ್ಸ್ ಡೇ ❤️