Vijayapura Daily - ವಿಜಯಪುರ ಡೈಲಿ

Vijayapura Daily - ವಿಜಯಪುರ ಡೈಲಿ All Current updates of Vijaypura city

ಮಾನ್ಯ ವರದಿಗಾರರು/ಸಂಪಾದಕರು ::::ಪತ್ರಿಕಾ ಪ್ರಕಟಣೆ ಕೃಪೆಗಾಗಿ :::::ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ೪೦ ಸಾವಿರಕ್ಕೂ ಹೆಚ್ಚು ಭೋಗಸ್ ಮ...
21/06/2023

ಮಾನ್ಯ ವರದಿಗಾರರು/ಸಂಪಾದಕರು


::::ಪತ್ರಿಕಾ ಪ್ರಕಟಣೆ ಕೃಪೆಗಾಗಿ :::::

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ೪೦ ಸಾವಿರಕ್ಕೂ ಹೆಚ್ಚು ಭೋಗಸ್ ಮತದಾನವಾಗಿದೆ. ಅನಧಿಕೃತವಾಗಿ ಮತದಾರರ ಪಟ್ಟಿಯಲ್ಲಿ ವಿಜಯಪುರ ನಗರ ಶಾಸಕರು ತಮ್ಮ ಪ್ರಭಾವ ಬಳಸಿ ಹೊರ ಜಿಲ್ಲೆಯವರ ಹೆಸರುಗಳನ್ನು ಸೇರ್ಪಡೆ ಮಾಡಿದ್ದಾರೆ. ಈ ಬಗ್ಗೆ ಲಿಖಿತ ದೂರು ನೀಡಿದರೂ ಸಹ ಜಿಲ್ಲಾ ಚುನಾವಣಾಧಿಕಾರಿಗಳು, ಆರ್.ಓಗಳು ಯಾವ ರೀತಿಯ ಕ್ರಮ ಜರುಗಿಸಿಲ್ಲ. ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ. ಈ ಪ್ರಕರಣದ ತನಿಖೆಗಾಗಿ ಈಗಾಗಲೇ ಮಾನ್ಯ ಲೋಕಾಯುಕ್ತರಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ((ಕೇಸ್ ನಂ. ಉಪಲೋಕಾಯುಕ್ತ/ಬಿಜಿಎಂ೩೪೭೦-೨೦೨೩) ಸಲ್ಲಿಸಲಾಗಿದೆ ಎಂದು ದೂರು ನೀಡಿರುವ ವಿಜಯಪುರ ನಗರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಇನಾಯತ್ ರೋಜೆವಾಲೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚಿಂಚೋಳಿ, ನಾಗಠಾಣ, ಸೇಡಂ ಹೀಗೆ ಅನೇಕ ಈ ಭಾಗದವರೇ ಅಲ್ಲದ ಮತದಾರರ ಹೆಸರುಗಳು ಸೇರ್ಪಡೆಗೊಂಡಿವೆ. ವಿಜಯಪುರ ನಗರ ಶಾಸಕರ ನೇತೃತ್ವದಲ್ಲಿ ಚಿಂಚೋಳಿಯಲ್ಲಿರುವ ಸಕ್ಕರೆ ಕಾರ್ಖಾನೆ, ಶೀತಲಿಕರಣ ಘಟಕಗಳು, ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಹೀಗೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನೇ ಇಲ್ಲಿಗೆ ತಂದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ನಾಗಠಾಣ ಮತಕ್ಷೇತ್ರದಲ್ಲಿರುವ ಸಾವಿರಾರು ಸಂಖ್ಯೆಯ ಮತದಾರರನ್ನು ನಗರ ಮತಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿದೆ. ಯಾವ ರೀತಿಯ ದಾಖಲೆಗಳಿಲ್ಲದೇ ಈ ರೀತಿ ಅವೈಜ್ಞಾನಿಕವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.
ಅಸಂಬದ್ಧವಾಗಿ ವಿಜಯಪುರ ನಗರ ಮತಕ್ಷೇತ್ರಕ್ಕೆ ಮತದಾರರ ಸೇರ್ಪಡೆಯಾಗುತ್ತಿರುವುದಕ್ಕೆ ಈ ಹಿಂದೆಯೇ ಜಿಲ್ಲಾ ಚುನಾವಣಾಧಿಕಾರಿಗಳಿಗೆ, ಸಂಬAಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಲಿಖಿತ ಆಕ್ಷೇಪಣೆ ಸಲ್ಲಿಸಿ ಡಿಲೀಟ್ ಮಾಡಿ ಎಂದು ಹೇಳಿದರೂ ಯಾವ ಕ್ರಮವೂ ಜರುಗಿಸಲಿಲ್ಲ. ಚುನಾವಣೆಯ ದಿನ ನಾವೇ ಈ ರೀತಿಯ ಅಕ್ರಮವೆಸಗಲು ಬಂದ ತಂಡಗಳನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದೇವೆ, ಸಾವಿರಾರು ಸಂಖ್ಯೆಯಲ್ಲಿ ಖೊಟ್ಟಿ ಮತದಾಣ ನಡೆದಿರುವುದು ಖಾತ್ರಿಯಾಗಿದೆ. ವಿಜಯಪುರ ನಗರ ಶಾಸಕರು ತಮ್ಮ ಪ್ರಭಾವ ಬಳಸಿ ಈ ರೀತಿಯ ಕೃತ್ಯವೆಸಗಿದ್ದಾರೆ. ಈ ಅಕ್ರಮದಲ್ಲಿ ಶಾಮೀಲಾದ ಎಲ್ಲರ ಮೇಲೆಯೂ ತನಿಖೆಯಾಗಬೇಕು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಉಪವಿಭಾಗಾಧಿಕಾರಿ ಶ್ರೀ ಕ್ಯಾ.ಮಹೇಶ ಮಾಲಗತ್ತಿ, ತಹಶೀಲ್ದಾರ ಶ್ರೀ ಮಾಂಜ್ರೆ ಸೇರಿದಂತೆ ೩೮ ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಪೂರಕವಾದ ಎಲ್ಲ ದಾಖಲೆಗಳನ್ನು ಮಾನ್ಯ ಲೋಕಾಯುಕ್ತರ ಸನ್ನಿಧಿಗೆ ಸಲ್ಲಿಸಲಾಗಿದೆ.
ಈ ರೀತಿ ಅಕ್ರಮವಾಗಿ ಮತದಾರರ ಹೆಸರು ಸೇರ್ಪಡೆ ಮಾಡುವುದು, ನಂತರ ಡಿಲೀಟ್ ಮಾಡಿಸುವುದು ಕೆಟ್ಟ ಪರಂಪರೆಗೆ ಹಾಗೂ ಪ್ರಜಾಪ್ರಭುತ್ವದ ಭವ್ಯ ಪರಂಪರೆಗೆ ಕೊಡಲಿ ಪೆಟ್ಟು ನೀಡಿದಂತಾಗಿದೆ. ಹೀಗಾಗಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಆಗಬೇಕಾದ ಅವಶ್ಯಕತೆ ಇದೆ.

ಮತ ದಾನ ಆಗಬೇಕು, ಯಾರೂ ಕೂಡ ಮತವನ್ನು ಮಾರಿಕೊಳ್ಳಬಾರದು. ಜಾತಿ ಧರ್ಮದ ಹೆಸರಿನಲ್ಲಿ ನಿಮಗೆ ದಾರಿತಪ್ಪಿಸುವ ಕುತಂತ್ರಿಗಳು ಬರುತ್ತಾರೆ. 5 ವರ್ಷ ದ...
09/05/2023

ಮತ ದಾನ ಆಗಬೇಕು, ಯಾರೂ ಕೂಡ ಮತವನ್ನು ಮಾರಿಕೊಳ್ಳಬಾರದು. ಜಾತಿ ಧರ್ಮದ ಹೆಸರಿನಲ್ಲಿ ನಿಮಗೆ ದಾರಿತಪ್ಪಿಸುವ ಕುತಂತ್ರಿಗಳು ಬರುತ್ತಾರೆ. 5 ವರ್ಷ ದುರಾಡಳಿತ ಮಾಡಿದ ದುರಾತ್ಮ ಗಳು ನಿಮ್ಮ ಹತ್ತಿರ ಬರುತ್ತವೆ. ಪ್ರತಿ ನಾಗರರೀಕರ ಹಕ್ಕು ಮತದಾನ.‌ ಯಾವುದೇ ಆಮಿಶಕ್ಕೆ ಒಳಗಾಗಬೇಡಿ. ನಿರ್ಭಯವಾಗಿ ಮತ ಚಲಾಯಿಸಿ.

09/05/2023

ಬೇರೆಯವರ ಮೇಲೇನೆ ಇವರ ಆರೋಪ.

06/05/2023

ಬಿಜೆಪಿಗೆ ಯಾಕೆ ಮತ ನೀಡಬಾರದು ತಿಳಿಯೋಣ ಬನ್ನಿ.

ರಾಜಕೀಯ, ನ್ಯಾಯಾಂಗ, ಮಾಧ್ಯಮ , ಬ್ಯಾಂಕಿಂಗ್ ,ಮೀಸಲಾತಿ ಟೆಂಡರ್, ಪೊಲೀಸ್, ಸರಕಾರಿ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಧಾರ್ಮಿಕ ಸೌಹಾರ್ದತೆಯನ್ನು ಬಲಿಕೊಟ್ಟರು. ರೈತರು, ಕಾರ್ಮಿಕರು, ಆರೋಗ್ಯ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು, ಸಾರಿಗೆ ನೌಕರರನ್ನು ಬೀದಿಯಲ್ಲಿ ನಿಲ್ಲಿಸಿದರು. ಬಡವರಿಗೆ ಸಿಗುವ ಅಕ್ಕಿ ನಿಲ್ಲಿಸಿದರು, ಗ್ಯಾಸ್ ಸಬ್ಸಿಡಿ ನಿಲ್ಲಿಸಿದರು, ಸಾಲಮನ್ನಾವಾಗಲಿಲ್ಲ, ಉದ್ಯೋಗ ಸೃಷ್ಟಿಯಾಗಲಿಲ್ಲ, ದಲಿತ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ನಿಲ್ಲಿಸಿದರು ಮುಸ್ಲಿಂ ಮೀಸಲಾತಿ ತೆಗೆದು ಹಾಕಿದರು. ಸಣ್ಣ ಪುಟ್ಟ ಕೈಗಾರಿಕೆಗಳು ಮುಚ್ಚಿಹೋದವು. ಅಷ್ಟೇ ಅಲ್ಲದೆ ಎಲ್ಲಿದರ ಮೇಲು ಜಿಎಸ್‌ಟಿ, ತಿನ್ನು ಅನ್ನದ ಮೇಲೆ ಬರಿಯೋ ಪುಸ್ತಕದ ಮೇಲೆ ಜಿ ಎಸ್ ಟಿ. ಜಿ ಎಸ್ ಟಿ. ಜಿ ಎಸ್ ಟಿ.....
ಎಟಿಎಂ ನಲ್ಲಿ ನಮ್ಮ ಹಣ ನಾವು ತೆಗೆದರೆ ದಂಡ ವಿಧಿಸಿದರು.
ಆಧಾರ್ ಫ್ಯಾನ್ ಲಿಂಕ್ ಮಾಡಲು ತಂಡವಿಸಿದರು.

ಇದಿಷ್ಟೇ ಅಲ್ಲದೆ ಧಾರ್ಮಿಕ ಹಾಗೂ ಸಮಾಜದ ಸ್ವಾಸ್ಥ್ಯ ಸೌಹಾರ್ದತೆಯನ್ನು ಹಾಳು ಮಾಡಲು. ಹಲಾಲ್ ಕಟ್, ಜಟ್ಕಾ ಕಟ್, ಗೋ ರಕ್ಷಣೆ, ಹೀಗೆ ವಿವಿಧ ರೀತಿಯಲ್ಲಿ ಎಲ್ಲ ಕಡೆಗಳಲ್ಲಿ ಶಾಂತಿ ಕದಡುವ ಕೆಲಸ ಮಾಡಿದರು.

40% ಕಮಿಷನ್ ಎಂದು ಇಡೀ ಜಗತ್ತಿಗೆ ಜಗಜ್ಜಾಗಿರವಾಗಿದ್ದು ಕರ್ನಾಟಕ ಬಿಜೆಪಿ ಸರ್ಕಾರ.
ಕನ್ನಡಿಗರ ಸ್ವಾಭಿಮಾನದ ಕೆಎಂಎಫ್ ಗೆ ಕುತ್ತು ತರುವ ಕೆಲಸ ಮಾಡಿದರು. ವಟ್ಟಿಲಲ್ಲಿ ಇಡೀ ರಾಜ್ಯವನ್ನು ಸರ್ವವಿಧದಲ್ಲೂ ಸರ್ವನಾಶ ಮಾಡಿದರು . ಇಂಥವರಿಗೆ ನಿಮ್ಮ ಅತ್ಯಮೂಲ್ಯವಾದ ಮತ ನೀಡಬೇಕಾ ಎಂದು ಒಮ್ಮೆ ಯೋಚಿಸಿ.

ಹಿಂತವರು ನಮಗೆ ಬೇಕಾ ?
06/05/2023

ಹಿಂತವರು ನಮಗೆ ಬೇಕಾ ?

04/05/2023

ಜಿಲ್ಲೆ, ರಾಜ್ಯ ಹಾಗೂ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಬಿಜೆಪಿಯ ಹಲವಾರು ನಾಯಕರು ಹೆತ್ತವರನ್ನು ಸೋಲಿಸುವ ರಣತಂತ್ರ ಹೆಣದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ. ಸುರೇಶ್ ಬಿರಾದಾರ, ಉಮೇಶ್ ವಂದಾಲ ಸಾವಿರಾರು ಜನ ನಿಷ್ಠಾವಂತ ಬಿಜೆಪಿಯ ಕಾರ್ಯಕರ್ತರು ಶಾಸಕರನ್ನಡಿಗೆ ವಿರುದ್ಧ ರೋಗಿ ಹೋಗಿ ಚುನಾವಣೆಯಿಂದ ದೂರ ಉಳಿದು ಯತ್ನಾಳರನ್ನು ಸೋಲಿಸಲು ಪಣತೊಟ್ಟಿದ್ದಾರೆ

04/05/2023

ಧರ್ಮ ದ್ವೇಶ ಹಾಗೂ ಸ್ವಪಕ್ಷೀಯ ನಾಯಕರ ಬಗ್ಗೆ ಕೀಳಾಗಿ ಮಾತನಾಡಿದ ಯತ್ನಾಳಗೆ ತಕ್ಕಪಾಠ ಕಲಿಸಲೇ ಬೇಕು ಎಂದು ವಿಜಯಪುರ ನಗರದ ಜನ ಸಜ್ಜಾಗಿದ್ದಾರೆ. ಒಳ್ಳೇಯ ವ್ಯಕ್ತಿಯನ್ನು
ಶಾಸಕರನ್ನಾಗಿ ಮಾಡುವ ಗುರಿ ನಮ್ಮದಾಗಿದೆ.

04/05/2023

ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ. ಯತ್ನಾಳ ಬಣ. ಅಪ್ಪು ಪಟ್ಟಣಶೆಟ್ಟಿ ಬಣ, ಮೂಲ ಬಿಜೆಪಿ ಬಣ ಎಂದು ಆಗಿದೆ.

03/05/2023

ವಿಜಯಪುರ ಅಭಿವೃದ್ಧಿ ಆಗಿಲ್ಲ ಶಾಸಕ ಪಿಎ ಗಳ ಅಭಿವೃದ್ಧಿ ಆಗಿದೆ. ಪಿ ಎ ಗಳ ಮೂಲಕ ಶಾಸಕರು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದೇ ಇವರ ಅಭಿವೃದ್ಧಿ. ಜನರ ಅಭಿವೃದ್ಧಿ ಆಗಿಲ್ಲ. ಇವರಿಂದ ಯಾವ ನಾಗರೀಕರಿಗೂ ಒಳ್ಳೆಯದಾಗಿಲ್ಲ.

Address

Near New Bus Stop
Bijapur
586101

Website

Alerts

Be the first to know and let us send you an email when Vijayapura Daily - ವಿಜಯಪುರ ಡೈಲಿ posts news and promotions. Your email address will not be used for any other purpose, and you can unsubscribe at any time.

Share

Category