SK SUKIL

SK SUKIL TV NEWS KARNATAKA

26/04/2026

ವಿಜಯಪುರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ
ಆ ಡೇಟ್ ಈ ಡೇಟ್ ಎಲ್ಲಾ ನೀವೇಕೊಡ್ತೀರಿ 25 ಡೇಟ್ ನಿಮ್ಮುವೆ ಆಗಿವೆ; ಸಚಿವ ಎಂ.ಬಿ.ಪಾಟೀಲ
ಡಿಕೆ ಶಿವಕುಮಾರ್ ಅವರು ವಿವಿಧ ರಾಜ್ಯಗಳ
ಚುನಾವಣೆಗಳ ಸಮಿತಿಯಲ್ಲಿದ್ದಾರೆ, ಅವರು ಕೆಪಿಸಿಸಿ
ಅಧ್ಯಕ್ಷರಿದ್ದಾರೆ.
ಹೀಗಾಗಿ ದೆಹಲಿಗೆ ಹೋಗಿ ಮುಖಂಡರನ್ನು ಭೇಟಿಯಾಗು
ವುದು ಸರ್ವೆಸಾಮಾನ್ಯ ಎಂದು ವಿಜಯಪುರ ಜಿಲ್ಲಾ
ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ
ಮಾತನಾಡಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ
ವಿಚಾರಕ್ಕೆ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿ
ನಾಯಕತ್ವ ಇನ್ನಿತರ ವಿಚಾರಗಳು ಮಂತ್ರಿಮಂಡಲ
ವಿಚಾರಗಳ ಬಗ್ಗೆ ಪದೇ ಪದೇ ಕೇಳಬೇಡಿ ಅದು ನಮ್ಮ
ಹೈಕಮಾಂಡ್ಲೆ ಬಿಟ್ಟ ವಿಚಾರ, ಹೈಕಮಾಂಡ್ ಯಾವ
ನಿರ್ಣಯ ಕೈಗೊಳ್ಳುತ್ತೆ ಸಿದ್ದರಾಮಯ್ಯನವರು ಹೇಳಿದ್ದಾರೆ
ಡಿಕೆ ಶಿವಕುಮಾರ್ ಅವರು ಕೂಡ ಹೇಳಿದ್ದಾರೆ ಕಾಂಗ್ರೆಸ್
ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ.. ಮೇ 6 ರ ಬಳಿಕ
ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ
ಆ ಡೇಟ್ ಈ ಡೇಟ್ ಎಲ್ಲಾ ನೀವೇ ಕೊಡ್ತೀರಿ 25 ಡೇಟ್
ನಿಮ್ಮುವೆ ಆಗಿವೆ ಎಂದರು. ಇಷ್ಟೆಲ್ಲಾ ಡೇಟ್ ಗೆ
ಹೈಕಮಾಂಡ್ ಪೂರ್ಣ ವಿರಾಮ ಹಾಕಬೇಕು ಎಂಬ ಪ್ರಶ್ನೆಗೆ
ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲರು ಅದು ನಿಮಗೆ
ಏನು ಸಂಬಂಧ, ನಮ್ಮ ಹೈಕಮಾಂಡಗೆ ಗೊತ್ತಿರುತ್ತೆ..
ಮನೆಯಲ್ಲಿರುತ್ತೆ ಸಮಸ್ಯೆಗಳು ರಾಜಕೀಯ ಪಕ್ಷದಲ್ಲಿ
ಇರಲ್ವಾ ಎಂದು ಪ್ರಶ್ನಿಸಿದರು. ನಾಲ್ಕು ಗೋಡೆಗಳ ಮಧ್ಯ
ಬಗೆಹರಿಸುತ್ತೇವೆ. ಮಾಧ್ಯಮಗಳ ಮುಂದೆ
ಮಾತನಾಡುತ್ತಿರುತ್ತದಾ?. ನಮ್ಮಲ್ಲಿ ಏನೇ ಸಮಸ್ಯೆ ಇದ್ದರೂ
ಹೈಕಮಾಂಡ್ ಅದನ್ನು ಗಮನಿಸುತ್ತಿರುತ್ತದೆ ಅದನ್ನು ನಾಲ್ಕು
ಗೋಡೆಗಳ ಮಧ್ಯೆ ಬಗೆಹರಿಸುತ್ತೆ ಎಂಬ ವಿಶ್ವಾಸ
ವ್ಯಕ್ತಪಡಿಸಿದರು. | TV NEWS KARNATAKA APR 26 2026

26/04/2026

ವಿಜಯಪುರ ನಗರದಲ್ಲಿ ಮೆ ಸಾಹಿತ್ಯ ಮೇಳ ವಿಜಯಪುರ ಬಳಗದ ವತಿಯಿಂದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು ಅನಿಲ ಹೊಸಮನಿ ಚೆನ್ನು ಕಟ್ಟಿಮನಿ ಯಮನಪ್ಪ ಗುಣಕಿ ಸುರೇಶ ಬಿಜಾಪುರ | TV NEWS KARNATAKA APR 26 2026

25/04/2026

ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಶಾಸಕರಾದ ಶ್ರೀ ರಾಜು ಗೌಡ ಪಾಟೀಲ್ ಅವರು ಹಲವಾರು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು | TV NEWS KARNATAKA APR 25 2026

25/04/2026

ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿ ವೃತ್ತದವರೆಗೆ ಕಾಂಗ್ರೆಸ್‌ನ ಮಹಿಳಾ ವಿರೋಧಿ ಕುತಂತ್ರ ಖಂಡಿಸಿ ಬೃಹತ್ ಪ್ರತಿಭಟನೆ
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಪ್ರತಿಭಟನೆ | TV NEWS KARNATAKA APR 25 2026

24/04/2026

ವಿಜಯಪುರ ನಗರದ ಉಪ ವಿಭಾಗದಲ್ಲಿನ ಕಳ್ಳತನ ಪ್ರಕರಣ ಭೇದಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ಪ್ರಕರಣದಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 10,50,000 ಮೌಲ್ಯದ 70 ಗ್ರಾಂ ಚಿನ್ನ, 15,42,000 ಮೌಲ್ಯದ 18 ಬೈಕ್‌ಗಳು, 1,10,000 ನಗದು, 13 ಸಾವಿರ ಮೌಲ್ಯದ ಒಂದು ಲ್ಯಾಪ್‌ಟಾಪ್, 10 ಸಾವಿರ ಮೌಲ್ಯದ ಒಂದು ಮೊಬೈಲ್ ಹಾಗೂ ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ಕೇಸ್‌ನಲ್ಲಿ ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರಿಂದ 15 ಲಕ್ಷ ಮೌಲ್ಯದ 100 ಗ್ರಾಂ 60 ಗುಂಜಿ ಚಿನ್ನ, 2 ಸಾವಿರ ಮೌಲ್ಯದ 10 ಗ್ರಾಂ ಬೆಳ್ಳಿ ಕೈಖಡಗ, 18 ಲಕ್ಷದ ಒಂದು ಕಾರು ಜಪ್ತಿ ಮಾಡಲಾಗಿದೆ ಎಂದರು. ಬಂಧಿತ ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮಕೈಗೊಳ್ಳಾಗಿದೆ ಎಂದರು. | TV NEWS KARNATAKA APR 24 2026

24/04/2026

ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ-
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ
ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ ಎಂದು
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಡಾ.ರಾಜ್ ಕುಮಾರ ಜನ್ಮದಿನೋತ್ಸವ ಹಾಗೂ ಅವರ ಗೀತೆಗಳ ಗಾಯನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ರಾಜಕುಮಾರ್ ಅವರು ತಮ್ಮ ಚಿತ್ರದ ಮೂಲಕ ಸಾಮಾಜಿಕ ಜಾಗೃತಿ ಸಂದೇಶ ಸಾರಿದರು, ಡಾ.ರಾಜಕುಮಾರ್ ಅವರ ಸರಳತೆ, ಶ್ರೇಷ್ಠತೆ ಎಲ್ಲರಿಗೂ ಸ್ಪೂರ್ತಿ ಎಂದರು.
ಬೇರೆ ಭಾಷೆಯಲ್ಲಿ ನಟಿಸದೇ ಕನ್ನಡದಲ್ಲಿ ಮಾತ್ರ ನಟಿಸಿ ವರನಟ...
ಧೃವತಾರೆ ಬಂದ ಸುದೈವ
ಉಪನ್ಯಾಸ‌ ಮಂಡಿಸಿದ ಪತ್ರಕರ್ತರಾದ ಪರಶುರಾಮ ಭಾಸಗಿ ಮಾತನಾಡಿ,
ಡಾ.ರಾಜಕುಮಾರ್ ಅವರದ್ದು
ಹೋಲಿಕೆಗೆ ನಿಲುಕದ ವ್ಯಕ್ತಿ, ಅವರಿಗೆ ಅವರೇ ಸಾಟಿ, ನಾವು ಒಳ್ಳೆಯವರನ್ನು ರಾಜಕುಮಾರ್ ಅವರಿಗೆ ಹೋಲಿಸುತ್ತೇವೆ, ಓರ್ವ ತಾಯಿ ತನ್ನ ಮಗನನ್ನು ನನ್ನ ಮಗ ರಾಜಕುಮಾರ್ ಇದ್ದಂತೆ ಇದ್ದಾನೆ ಎಂದು ಅಭಿಮಾನದಿಂದ ಹೇಳುವುದುಂಟು, ಅಭಿಮಾನಕ್ಕೆ ಹೋಲಿಕೆ ಡಾ.ರಾಜ್ ಆಗಿದ್ದಾರೆ ಹೊರತು ಅವರಿಗೆ ಹೋಲಿಕೆ ಪದಗಳಿಲ್ಲ, ಅವರದ್ದು ವರ್ಣನಾತೀತ ವ್ಯಕ್ತಿತ್ವ, ಅವರ ಬಣ್ಣಿಸಲು ಉಪಮೇಯಗಳೇ ಇಲ್ಲ ಎಂದರು. ಕನ್ನಡ ನಾಡಿನ ಚಿತ್ರರಂಗಕ್ಕೆ ಧೃವತಾರೆಯಾಗಿ ಬಂದಿದ್ದು ನಮ್ಮ ಸುದೈವ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಮಾತನಾಡಿ,
ಡಾ.ರಾಜಕುಮಾರ್ ನಾಟಕ‌‌ ಕಂಪನಿ ಮೂಲಕವೇ ಚಿತ್ರ ರಂಗ ಬೆಳಗಿದ ಮಹಾನ್ ಚೇತನ, ರಂಗಭೂಮಿಯೇ ಅವರ ತಾಯಿಬೇರು ಎಂದರು.
ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಸಮಾವೇಶದಲ್ಲಿ ಡಾ.ರಾಜ್
ಅವರು ಭಾಗವಹಿಸಿ ಹುಟ್ಟಿದರೆ ಕನ್ನಡ ನಾಡಿನಲಿ ಹುಟ್ಟಬೇಕು ಎಂದು ಹಾಡಿದ, ಆ ಹಾಡಿಗೆ ಹಾರ್ಮೋನಿಯಂ ನುಡಿಸಿದ
ಭಾಗ್ಯ ನನ್ನದು, ನಂತರ ನಮ್ಮ ತಂದೆಯವರು ಮಾಸ್ಟರ್, ನೀವು ಮಾಸ್ಟರ್ ಎಂದು ಸರಳತೆಯಿಂದ ನನ್ನನ್ನು ಅಭಿನಂದಿಸಿದರು, ಇದು ಅವರ ಸರಳತೆಯ ಸಾಕ್ಷಿ ಎಂದರು.
ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಭೀಮರಾವ ಜಿಗಜಿಣಗಿ, ಸೋಮು ಕಲ್ಲೂರ, ಫಯಾಜ್ ಕಲಾದಗಿ, ಸುರೇಶ ಬಿಜಾಪೂರ,ಶರಣು ಸಬರದ ಮೊದಲಾದವರು ಉಪಸ್ಥಿತರಿದ್ದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿದರು. ವಿರೇಶ ವಾಲಿ ಪ್ರಾರ್ಥಿಸಿದರು. ವಿರೇಶ ವಾಲಿ | TV NEWS KARNATAKA APR 24 2026

24/04/2026

ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 14ರಂದು ಮಧ್ಯಾಹ್ನ 3ರ ಸುಮಾರಿಗೆ ಅಲಿಯಾಬಾದ್ ಬಳಿ ಥಾರ್ ಕಾರಿಗೆ ಟಿಪ್ಪರ ವಾಹನ ಹಾಯಿಸಿ ಕಾರಿನಲ್ಲಿದ್ದ ರಾಜು ಖರೆನ್ನು ಕಲ್ಲಿನಿಂದ ಜಜ್ಜಿ ನಂತರ ಗುಂಡು ಹಾಯಿಸಿ ಬರ್ಬರವಾಗಿ ಆರೋಪಿಗಳು ಹತ್ಯೆಗೈದು ಎಸ್ಕೇಪ್ ಆಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅಬುಶ್ಯಾ ಕೊಡ್ಲೇಕರ್, ಅಬುಶ್ಯಾ ಮಾನೆ, ವಾಗೀಶ ಫೋಳ್, ಜಾಲಿಂದರ್ ಹಕ್ಕೆ, ಮುರಗು ಹಕ್ಕೆ ಬಂಧಿತ ಆರೋಪಿಗಳು. ಅಲ್ಲದೇ, ಆರೋಪಿಗಳ ಬಗ್ಗೆ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು. | TV NEWS KARNATAKA APR 24 2026

23/04/2026

ವಿಜಯಪುರ ನಗರದಲ್ಲಿ ಮಳೆ ಮಿಂಚು ಗುಡುಗು | TV NEWS KARNATAKA APR 23 2026

23/04/2026

ವಿಜಯಪೂರ : ಡೋಣಿ ನದಿಯನ್ನು ಸರಿಯಾಗಿ ಮೂಲ ನಕಾಶೆಯಂತೆ ಭೂ-ಮಾಪನ ಮಾಡಿಸಿ, ಶಾಶ್ವತ ಪರಿಹಾರಕ್ಕಾಗಿ ತಡೆಗೋಡೆ ನಿರ್ಮಿಸಿ, ಅಕ್ಕಪಕ್ಕದಲ್ಲಿ ದೊಡ್ಡ ಬೇರುಗಳ ಮರ ಅಥವಾ ಬೀದಿರುಗಳನ್ನು ನೆಟ್ಟು ಯೋಜನೆ ಪೂರ್ಣಗೊಳಿಸಬೇಕು, ಡೋಣಿ ನದಿಯಿಂದ ನಷ್ಟಗೊಂಡ ಸಮಸ್ತ ರೈತರಿಗೆ ಪರಿಹಾರ ನೀಡಬೇಕು ಮತ್ತು ಸಾರವಾಡ ಗ್ರಾಮ ಮುಳಗಡೆ ಆಗುವ ಸಂಭವವಿರುತ್ತದೆ, ಸಾರ್ವಜನಿಕ ಆಸ್ತಿ ಪಾಸ್ತಿ ಹಾಳಾದರೆ ಜೀವ ಹೋದರೆ ಜಿಲ್ಲಾಡಳಿತವೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಕನಾಟಕ ರಾಜ್ಯ ರೈತ ಸಂಘ ಹಾಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ ಡೋಣಿ ನದಿಗೆ ಅಂದಾಜು ೧೦ ಕೋಟಿ ವೆಚ್ಚದಲ್ಲಿ ೫ ಕಡೆ ಹೂಳು ತೆಗೆಯುತ್ತಿರುವುದು ಕೇವಲ ತಾತ್ಕಾಲಿಕವಾಗಿ ಕಾಮಗಾರಿ ಹೆಸರಲ್ಲಿ ಬಿಲ್ ಎತ್ತುವ ಕೆಲಸ ನಡೆದಿದೆ, ಸಾರವಾಡದ ಸಮೀಪ ಅನೇಕ ರೈತರ ಜಮೀನುಗಳಲ್ಲಿ ರೈತರಿಗೆ ತಿಳಿಸದೇ ಮನಸ್ಸೋ ಇಚ್ಚೆ ಅವರ ಜಮೀನುಗಳಲ್ಲಿ ಮುಳ್ಳು ಕಂಠಿ ಕಡಿದು, ದೊಡ್ಡ ದೊಡ್ಡ ತೆಗ್ಗು ತಗೆಯುತ್ತಿದ್ದು, ಡೋಣಿ ತನ್ನ ದಿಕ್ಕನ್ನು ಬಿಟ್ಟು ಬೇರೆಡೆ ಹರಿಯುವುದರಿಂದ ರೈತರು ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿದ್ದಾರೆ ಅಂತಹ ರೈತರು ಬದುಕು ನಡೆಸುವುದಾದರೂ ಹೇಗೆ ಎಂದರು.
ಕೂಡಲೇ ಡೋಣಿ ನದಿಯ ಸರಕಾರಿ ಮೂಲ ನಕಾಶೆಯನ್ನು ನೋಡಿ ಅದರಂತೆ ಅಕ್ಕಪಕ್ಕದ ರೈತರೊಂದಿಗೆ ಸಭೆ ಮಾಡಿ ಹದ್ದಬಸ್ತ ಮಾಡಿ, ಜಂಗಲ ಕಟಿಂಗ್ ಮಾಡಿ, ನಂತರದಲ್ಲಿ ಕಲ್ಲಿನಿಂದ ತಡೆಗೊಡೆ ನೀರ್ಮಿಸಬೇಕು, ಮತ್ತು ನ್ಯಾಶನಲ್ ಬಂಬು ಮಿಷನ್ ಅಡಿಯಲ್ಲಿ ಡೋಣಿಯ ೨ ಬದಿಗಳಲ್ಲಿ ಬೀದಿರನ್ನು ಹಚ್ಚುವುದರಿಂದ ಈ ಯೋಜನೆ ಶಾಶ್ವತವಾಗಿ ಮತ್ತು ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ನೀರು ನುಗ್ಗದೇ ತಡೆಯಬಹುದಾಗಿದೆ ಎಂದರು | TV NEWS KARNATAKA APR 23 2026

23/04/2026

ವಿಜಯಪುರ ನಗರದಲ್ಲಿ ಖಾಸಗಿ ಹೋಟೆಲದಲ್ಲಿ ಕೆಪಿಸಿಸಿ ವಕ್ತಾರರಾದ ಶ್ರೀ ಎಸ್ ಎಂ ಪಾಟೀಲ್ (ಗಣಿಹಾರ) ಹಾಗೂ ಎಂ ಸಿ ಮುಲ್ಲಾ ರವರು
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತ ಇದ್ದರು ವಸಂತ ಹೊನಮೊಡೆ ನಾಗರಾಜ್ ಲಂಬು ಫಯಾಜ್ ಕಲಾದಗಿ | TV NEWS KARNATAKA APR 23 2026

22/04/2026

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ
ಸ್ಥಳದಲ್ಲೆ ಇಬ್ಬರು ಬೈಕ್ ಸವಾರರು
ದುರ್ಮರಣಕ್ಕೀಡಾಗಿರುವ ಘಟನೆ ವಿಜಯಪುರ ಜಿಲ್ಲೆಯ
ಬಸವನ ಬಾಗೇವಾಡಿ ಪಟ್ಟಣದ ನಾಗೂರು ರಸ್ತೆ ಬಳಿ
ನಡೆದಿದೆ. ಶಾಹಿದ್ ಹುಬ್ಬಳ್ಳಿ (21), ಸಂಗಯ್ಯ ಹಿರೇಮಠ
(24) ಸ್ಥಳದಲ್ಲೆ ಸಾವನ್ನಪ್ಪಿದ ದುರ್ದೈವಿಗಳು. ಇಬ್ಬರ ಬೈಕ್
ಮುಖಾಮುಖಿ ಡಿಕ್ಕಿಯಾಗಿ ವೇಗವಾಗಿ ಬೈಕ್
ಚಲಾಯಿಸಿದ್ದೆ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಘಟನೆ ನಡೆದಿದ್ದು, ಸ್ಥಳಕ್ಕೆ ಬಸವನ ಬಾಗೇವಾಡಿ
ಪೊಲೀಸರ ಭೇಟಿ ಪರಿಶೀಲನೆ ನಡೆಸಿ ಪ್ರಕರಣ
ದಾಖಲಿಸಿಕೊಂಡಿದೆ. | TV NEWS KARNATAKA APR 22 2026

Address

WARD NO 15 HOUSE NO 1169 HASIMPEER DARDA Road AMBEDAKAR NAHAR VIJAYAPUR
Bijapur
586104

Alerts

Be the first to know and let us send you an email when SK SUKIL posts news and promotions. Your email address will not be used for any other purpose, and you can unsubscribe at any time.

Contact The Business

Send a message to SK SUKIL:

Share