09/06/2026
#ಅಜಯ್_ಸಿಂಗ್_ಅವರಿಗೆ_ಮಂತ್ರಿಸ್ಥಾನ_ಸಿಗಲಿ
ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಅಜಯ್ ಸಿಂಗ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಗುಲ್ಬರ್ಗ ಡ್ಯಾನ್ಸ್ ಸಂಘದ ಅಧ್ಯಕ್ಷರಾದ ಶ್ರೀ ವೆಂಕಪ್ಪ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ. ದಿವಂಗತ ಧರಂಸಿಂಗ್ ಅವರ ಕುಟುಂಬವು ಸದಾ ಕಲಬುರಗಿ ಮತ್ತು ಶಹಾಬಜಾರ್ ಭಾಗದ ಜನರ ಕಷ್ಟ-ಸುಖಗಳಿಗೆ ಹೆಗಲಾಗಿ ನಿಂತಿದ್ದು, ಇಂತಹ ಸಮಾಜಮುಖಿ ನಾಯಕರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗದೇ ಇರುವುದು ಸಾರ್ವಜನಿಕರಲ್ಲಿ ಬೇಸರ ತಂದಿದೆ. ನಮ್ಮ ಭಾಗದ ಕಲಾವಿದರು ಮತ್ತು ಸಾರ್ವಜನಿಕರು ಒಕ್ಕೊರಲಿನಿಂದ ಮಾಡಿರುವ ಈ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಶೀಘ್ರದಲ್ಲೇ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಇಂತಿ,
ವಾರ್ಡ್ ಸಂಖ್ಯೆ 11ರ (ಚನ್ನಮಲ್ಲೇಶ್ವರ ನಗರ ಹಾಗೂ ಸುತ್ತಮುತ್ತಲ ಪ್ರದೇಶದ) ಸಾರ್ವಜನಿಕರು ಮತ್ತು ಕಲಾವಿದ ಅಭಿಮಾನಿ ಬಳಗ, ಕಲಬುರಗಿ.
ಚನ್ನಮಲ್ಲೆಶ್ವರ್ ನಗರ ಬಡಾವಣೆ ಶಹಾಬಾಜಾರ್ ವಾರ್ಡ ನಂಬರ್ 11Mallikarjun Kharge 🔵 Mallikarjun Kharge Fans Official DK Shivakumar Rahul Gandhi Aland Congress AICC Communications KalaburagiDistrict Congress Indian Youth Congress Indian National Congress Indian National Congress - Karnataka