HELLO kodagu

HELLO kodagu NEWS - JOBS -RENT ND LEASE - SITES

*ಕೊಡಗು: ಸಿದ್ದಾಪುರ: ಕಾಡಾನೆ ದಾಳಿಗೆ ವಿದ್ಯಾರ್ಥಿ ಸಾವು*ಮಡಿಕೇರಿ:ಕಾಡಾನೆ ದಾಳಿಗೆ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಸಿದ್ದಾಪುರದಲ್ಲಿ...
14/01/2022

*ಕೊಡಗು: ಸಿದ್ದಾಪುರ: ಕಾಡಾನೆ ದಾಳಿಗೆ ವಿದ್ಯಾರ್ಥಿ ಸಾವು*

ಮಡಿಕೇರಿ:

ಕಾಡಾನೆ ದಾಳಿಗೆ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಸಿದ್ದಾಪುರದಲ್ಲಿ ಸಂಭವಿಸಿದೆ.

ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ವತೇಕ್ರೆ ಗ್ರಾಮದ ಕಬೀರ್ ಮತ್ತು ಸಮೀರಾ ದಂಪತಿಗಳ ಪುತ್ರ ವಿದ್ಯಾರ್ಥಿ ಆಶಿಕ್ (19) ಮೃತ ವಿದ್ಯಾರ್ಥಿ.
ಮತ್ತೋರ್ವ ವಿದ್ಯಾರ್ಥಿ ಅಸ್ಮಿಲ್ (19) ಗಾಯಗೊಂಡಿದ್ದಾರೆ.

ಅರೆಕಾಡಿನಿಂದ ನೆಲ್ಯಹುದಿಕೇರಿಗೆ ಬೈಕಿನಲ್ಲಿ ಬರುತ್ತಿದ್ದ ಸಂದರ್ಭ ಹಠಾತ್ತನೆ ಕಾಡಾನೆಯೊಂದು ಕಾಫಿ ತೋಟದಿಂದ ರಸ್ತೆಗೆ ಬಂದು ಬೈಕ್ ಸವಾರರ ಮೇಲೆ ದಾಳಿ ಮಾಡಿದೆ. ಕಾಡಾನೆ ದಾಳಿಗೆ ಆಶಿಕ್ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಆಶಿಕ್ ನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸುವ ಸಂದರ್ಭ ಸಾವನ್ನಪ್ಪಿದ್ದಾನೆ. ಅಸ್ಮಿಲ್ ಗೆ ಚಿಕ್ಕ ಪುಟ್ಟ ಗಾಯಗಳಾಗಿವೆ.

28/07/2021
28/07/2021

ಕೊಯನಾಡು ಬಳಿ ಬಸ್ ಅಪಘಾತ ನಾಲ್ವರಿಗೆ ಗಾಯ .

17/01/2021

JOBS

FOR WATSAPP HELLO KODAGU NEWS GROUP
30/09/2020

FOR WATSAPP HELLO KODAGU NEWS GROUP

WhatsApp Group Invite

*_ಸುಂಟಿಕೊಪ್ಪದ ಅಪ್ಪರಂಡ ಬಡಾವಣೆ ಸೀಲ್ ಡೌನ್_*       ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ 11 ವರ್ಷದ ಬಾಲಕಿಗೆ  ಕೊರೋನಾ   ಸೋಂಕು ದೃಢವಾಗ...
12/07/2020

*_ಸುಂಟಿಕೊಪ್ಪದ ಅಪ್ಪರಂಡ ಬಡಾವಣೆ ಸೀಲ್ ಡೌನ್_*
ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ 11 ವರ್ಷದ ಬಾಲಕಿಗೆ ಕೊರೋನಾ ಸೋಂಕು ದೃಢವಾಗಿದ್ದು ,ಇದೀಗ ಮುಖ್ಯ ರಸ್ತೆಯಿಂದ ಅಪ್ಪರಂಡ ಬಡಾವಣೆಯ ಪ್ರವೇಶ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಿಂದ ಬಡಾವಣೆಗೆ ಇದ್ದ ಸಂಪರ್ಕ ರಸ್ತೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಪ್ರವೇಶ ನಿರ್ಬಂಧಿಸಿ ಸೀಲ್ ಡೌನ್ ಮಾಡಿದ್ದಾರೆ.

*ದಿನಾಂಕ:12-07-2020 ಅಪರಾಹ್ನ 3.30 ಗಂಟೆ** #ಕೊಡಗು  #ಜಿಲ್ಲೆಯಲ್ಲಿ  #ಈ  #ದಿನ  #ಪುನ:  #ಹೊಸದಾಗಿ  #13  #ಕೋವಿಡ್  #ಸೋಂಕಿತ  #ಪ್ರಕರಣಗಳ...
12/07/2020

*ದಿನಾಂಕ:12-07-2020 ಅಪರಾಹ್ನ 3.30 ಗಂಟೆ*

* #ಕೊಡಗು #ಜಿಲ್ಲೆಯಲ್ಲಿ #ಈ #ದಿನ #ಪುನ: #ಹೊಸದಾಗಿ #13 #ಕೋವಿಡ್ #ಸೋಂಕಿತ #ಪ್ರಕರಣಗಳು #ವರದಿಯಾಗಿವೆ*
ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ದಂಡಿನಪೇಟೆಯ ವ್ಯಕ್ತಿಯ ಪ್ರಾಥಮಿಕ ಸಂಪರ್ಕಗಳಾದ 25 ವರ್ಷದ ಮಹಿಳೆ, 45 ವರ್ಷದ ಮಹಿಳೆ, 49 ವರ್ಷದ ಪುರುಷ, 40 ವರ್ಷದ ಮಹಿಳೆ, 22 ವರ್ಷದ ಮಹಿಳೆ, 20 ವರ್ಷದ ಹುಡುಗ, 17 ವರ್ಷದ ಹುಡುಗಿ, 24 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆಯ ಊರುಗುತ್ತಿ ನಿವಾಸಿ, ಮಹಾರಾಷ್ಟ್ರದಿಂದ ಹಿಂದಿರುಗಿರುವ ಜ್ವರ ಲಕ್ಷಣಗಳಿದ್ದ 63 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ಅಂಬೇಡ್ಕರ್ ಬ್ಲಾಕ್ ನ ಜ್ವರ ಲಕ್ಷಣಗಳಿದ್ದ 45 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪದ ಜ್ವರ ಲಕ್ಷಣಗಳಿದ್ದ 11 ವರ್ಷದ ಹುಡುಗಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ಪಟ್ಟಣದ ಪುಟಾಣಿ ನಗರದ, ಚಾಮರಾಜ ಬಂಗಲೆ ಬಳಿಯ ಅಂಬ್ಯುಲೆನ್ಸ್ ಚಾಲಕ 53 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ ನಿವಾಸಿ ಜ್ವರ ಲಕ್ಷಣಗಳಿದ್ದ 63 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

*ಜಿಲ್ಲೆಯಲ್ಲಿ ಹೊಸದಾಗಿ 05 ನಿಯಂತ್ರಿತ ವಲಯಗಳನ್ನು ತೆರೆಯಲಾಗಿದೆ. *
ಊರುಗುತ್ತಿ, ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು ಅಂಬೇಡ್ಕರ್ ಬ್ಲಾಕ್, ಹೆಬ್ಬಾಲೆ, ಸೋಮವಾರಪೇಟೆ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗ, ಸುಂಟಿಕೊಪ್ಪ ಚಾಮರಾಜ ಬಂಗ್ಲೆ, ಪುಟಾಣಿ ನಗರ, ಮಡಿಕೇರಿ ತಾಲ್ಲೂಕು ಅಯ್ಯಪ್ಪ ದೇವಸ್ಥಾನ ರಸ್ತೆ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು
*ಘೋಷ್ವಾರೆ*

ಜಿಲ್ಲೆಯಲ್ಲಿ ವರದಿಯಾದ ಸೋಂಕಿತ ಪ್ರಕರಣಗಳು : 169
ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು: 62
ಸಕ್ರಿಯ ಪ್ರಕರಣಗಳು: 105
ಮೃತ ಪಟ್ಟ ಪ್ರಕರಣಗಳು: 02
ಒಟ್ಟು ನಿಯಂತ್ರಿತ ಪ್ರದೇಶಗಳು: 68

ಜಿಲ್ಲಾಧಿಕಾರಿ,
ಕೊಡಗು ಜಿಲ್ಲೆ, ಮಡಿಕೇರಿ

12/07/2020

*ದಿನಾಂಕ 12.07.2020*

ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿದ್ದು, ದೃಢಪಟ್ಟ ಪ್ರಕರಣಗಳಲ್ಲಿ ಅವರ ಪ್ರಯಾಣ ಹಿನ್ನಲೆಯನ್ನು ಪಡೆದು ಪರಿಶೀಲಿಸಿದಾಗ ವಿದೇಶ / ಹೊರ ರಾಜ್ಯ / ಹೊರ ಜಿಲ್ಲೆಯ ಪ್ರಯಾಣ ಹಿನ್ನಲೆ ಇರುವುದು ಕಂಡುಬಂದಿರುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಾದಲ್ಲಿ ಹಲವು ಮಂದಿ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಕೊಡಗು ಜಿಲ್ಲೆಯಲ್ಲಿ ಈ ಕೆಳಕಂಡಂತೆ ಸಂಪರ್ಕ ತಡೆ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆ.

1. ವಿದೇಶದಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ತಡೆ ಮತ್ತು ನಂತರದ 7 ದಿನಗಳು ಗೃಹ ಸಂಪರ್ಕ ತಡೆಯಲ್ಲಿ ಇರತಕ್ಕದ್ದು.

2. ಹೊರ ರಾಜ್ಯದಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿ ಇರತಕ್ಕದ್ದು.

3. ಹೊರ ಜಿಲ್ಲೆಗಳಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿ ಇರತಕ್ಕದ್ದು.

4. ಈ ರೀತಿಯಾಗಿ ಸಂಪರ್ಕ ತಡೆಯಲ್ಲಿ ಇರುವವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಕಾರ್ಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿಕೊಳ್ಳುವುದು.

5. ಸ್ಥಳೀಯ ಕಾರ್ಯವ್ಯಾಪ್ತಿಯ ಗ್ರಾಮ ಪಂಚಾಯತ್ / ಪಟ್ಟಣ ಪಂಚಾಯತ್ / ನಗರ ಸಭೆ / ಆರೋಗ್ಯ ಇಲಾಖೆ / ಪೊಲೀಸ್ ಇಲಾಖೆ ಮತ್ತು ಈಗಾಗಲೇ ಜನಪ್ರತಿನಿಧಿಗಳನ್ನು ಒಳಗೊಂಡಂತೆ ರಚಿತವಾಗಿರುವ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ / ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಯು ಮೇಲಿನ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುವುದು ಮತ್ತು ನಿಗಾವಹಿಸುವುದು.

6. ತುರ್ತು / ಅನಿವಾರ್ಯ / ವೈದ್ಯಕೀಯ ಹಿನ್ನಲೆಯಲ್ಲಿ ಆಗಮಿಸಿದಲ್ಲಿ ಈ ಬಗ್ಗೆ ಜನಪ್ರತಿನಿಧಿಗಳನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ / ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಯು ಪರಿಶೀಲಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದು.

ನಿಯಮದ ಉಲ್ಲಂಘನೆಯಾಗುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಸ್ಥಳೀಯ ಕಾರ್ಯವ್ಯಾಪ್ತಿಯ ಗ್ರಾಮ ಪಂಚಾಯತ್ / ಪಟ್ಟಣ ಪಂಚಾಯತ್ / ನಗರ ಸಭೆ / ಆರೋಗ್ಯ ಇಲಾಖೆ / ಪೊಲೀಸ್ ಇಲಾಖೆ ಅಥವಾ ಜನಪ್ರತಿನಿಧಿಗಳನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ / ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಗೆ ಮಾಹಿತಿ ನೀಡಲು ಕೋರಲಾಗಿದೆ.

*ಜಿಲ್ಲಾಧಿಕಾರಿ,*
*ಕೊಡಗು ಜಿಲ್ಲೆ, ಮಡಿಕೇರಿ.*

COVID19 Update!As of 12 July 2020, 03:30 pm13 more positive cases from Kodagu.1. 25 year old female, 45 year old female,...
12/07/2020

COVID19 Update!

As of 12 July 2020, 03:30 pm

13 more positive cases from Kodagu.

1. 25 year old female, 45 year old female, 49 year old male, 40 year old female, 22 year old female, 20 year old male, 17 year old female and 24 year old male, primary contacts of positive patient who expired recently from Dandinpete, Kushalnagar, Somwarpet taluk.

2. 63 year female, a case of ILI and family member returned from Maharashtra native of Uruguthhi, Kodlipet, Somwarpet taluk.

3. 45 years female, a case of ILI from Ambedkar block, Hebbale, Somwarpet taluk.

4. 11 years female, a case of ILI from Suntikoppa, Somwarpet taluk.

5. 53 years male, ambulance driver from Chamraj bungalow, Putaninagar nagar, Madikeri.

6. 63 years male, a case of ILI from Ayappa Swamy Temple Road, Kushalnagar, Somwarpet taluk.

5 more containment zones opened at Uruguthhi Kodlipet, Ambedkar block Hebbale, Suntikoppa behind Primary health centre, Chamaraj bungalow Putaninagar and Ayyappa swamy temple road Kushalnagar Somwarpet taluk.

Total number of positive cases: 169
Total discharged: 62.
Total active cases: 105.
Total death: 02.
Total number of containment zones: 68

Deputy Commissioner,
Kodagu District.

17/12/2019

*ನಿಧನ ಸುದ್ದಿ* ಪಾಲಿಬೆಟ್ಟ ಜಿಎಂಪಿ ಶಾಲೆ ಶಿಕ್ಷಕಿ ಮಚ್ಚಾರಂಡ ಸಬಿತಾ ಇಂದು ನಿಧನರಾದರು.‌ ಅಂತ್ಯಕ್ರಿಯೆ ನಾಳೆ ಅಮ್ಮತ್ತಿ ಒಂಟಿಯಂಗಡಿ ಗ್ರಾಮದಲ್ಲಿ ನಡೆಯಲಿದೆ.17Dec 2019, 8.00 pm, info By *HELLO KODAGU NEWS*

12/12/2019

Address

Siddapur
571253

Telephone

+91 94812 67070

Website

Alerts

Be the first to know and let us send you an email when HELLO kodagu posts news and promotions. Your email address will not be used for any other purpose, and you can unsubscribe at any time.

Contact The Business

Send a message to HELLO kodagu:

Share